alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಸೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್….

ಮುಂಬೈ: ಪ್ರಮುಖ ಟೆಲಿಕಾಂ ಕಂಪನಿ ಏರ್ ಸೆಲ್ ದಿವಾಳಿಯ ಅಂಚಿನಲ್ಲಿದೆ. ಸಾಲದ ಹೊರೆ ಜಾಸ್ತಿಯಾಗಿರುವುದರಿಂದ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ(NCLT) ಸದ್ಯದಲ್ಲಿಯೇ ದಿವಾಳಿತನದ ಅರ್ಜಿಯನ್ನು ಸಲ್ಲಿಸುವ ಸಾಧ್ಯತೆ ಇದೆ.

ಏರ್ ಸೆಲ್ ಆಡಳಿತ ಮಂಡಳಿ ವಿಸರ್ಜನೆಯಾದ ನಂತರ ದಿವಾಳಿತನ ಅರ್ಜಿಯನ್ನು ಸಲ್ಲಿಸುವ ಸಾಧ್ಯತೆ ಇದೆ. ಬಂಡವಾಳ ಆಕರ್ಷಿಸುವ ಯೋಜನೆ ಮತ್ತು ಕಂಪನಿಯಲ್ಲಿ ವಿಲೀನ ಯೋಜನೆಗಳಿಂದಾಗಿ ಏರ್ ಸೆಲ್ ಸಂಕಷ್ಟಕ್ಕೆ ಸಿಲುಕಿದೆ.

ಕಂಪನಿ ನಿರ್ವಹಣೆಗೆ ಹಣದ ಕೊರತೆ ಎದುರಾಗಿದೆ. ಮಲೇಷ್ಯಾದ ಮ್ಯಾಕ್ಸಿಸ್ ಸಂಸ್ಥೆ ರೂಪಿಸಿದ ಯೋಜನೆಗಳು ಕೂಡ ಫಲಕಾರಿಯಾಗಿಲ್ಲ. ಇವೇ ಮೊದಲಾದ ಕಾರಣಗಳಿಂದ ಕಂಪನಿ ಸಂಕಷ್ಟದಲ್ಲಿದ್ದು, ದಿವಾಳಿತನದ ಅರ್ಜಿಯನ್ನು ಸಲ್ಲಿಸಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...