alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ ಅಂತ್ಯದೊಳಗೆ ಬ್ಯಾಂಕ್ ಗ್ರಾಹಕರು ಮಾಡಲೇಬೇಕಿದೆ ಈ ಕೆಲಸ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಂಯಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಅಥವಾ ಯಾವುದೇ ಪ್ರಮುಖ ವಾಣಿಜ್ಯ ‌ಬ್ಯಾಂಕ್ ಗಳ ಗ್ರಾಹಕರಾಗಿದ್ದರೆ ಇದೊಂದು ಮುಖ್ಯ‌ ಮಾಹಿತಿ. ಆರ್.ಬಿ.ಐ. ಸೂಚನೆ ಮೇರೆಗೆ ಎಲ್ಲ‌ ಬ್ಯಾಂಕ್ ಗಳೂ ತಮ್ಮ ಡೆಬಿಟ್ ಕಾರ್ಡ್ ಗಳನ್ನು‌ ಮೇಲ್ದರ್ಜೆಗೆ ಹೆಚ್ಚಿಸಿಕೊಳ್ಳುವಂತೆ ಗ್ರಾಹಕರಿಗೆ ತಿಳಿಸುತ್ತಿವೆ.

ಡಿಸೆಂಬರ್ ‌31 ರೊಳಗೆ ಎಲ್ಲ ಗ್ರಾಹಕರೂ ತಮ್ಮ ಡೆಬಿಟ್ ಕಾರ್ಡ್‌ಗಳನ್ನು ಬದಲಾಯಿಸಲು ಅಥವಾ ಮೇಲ್ದರ್ಜೆಗೆ ಏರಿಸಿಕೊಳ್ಳಬೇಕು. ಆನ್ಲೈನ್ ‌ವಂಚನೆಯಿಂದ ರಕ್ಷಿಸಿಕೊಳ್ಳಲು ಈ ಕ್ರಮ ಅನುಸರಿಸಬೇಕು.

ಎಲ್ಲ ಬ್ಯಾಂಕ್ ಗಳೂ ಉಚಿತವಾಗಿ ಕಾರ್ಡ್ ಬದಲಾಯಿಸಿಕೊಡಬೇಕು. ಹೊಸ ಕಾರ್ಡ್ ಗಳು ಹೆಚ್ಚಿನ ರಕ್ಷಣೆಯುಳ್ಳ ಇಎಂವಿ ಚಿಪ್ ಒಳಗೊಂಡಿರುತ್ತದೆ. ಇಎಂವಿ ಕಾರ್ಡ್ ಗಳು ಸ್ಕಿಮ್ಮಿಂಗ್ ನಿಂದ ರಕ್ಷಣೆ ನೀಡುತ್ತವೆ. ಸದ್ಯ ಬಳಕೆಯಲ್ಲಿರುವ ಮಗ್ ಸ್ಟ್ರಿಪ್ ಅಳವಡಿಸಿದ ಕಾರ್ಡ್ ಗಳಿಗಿಂತ ಹೆಚ್ಚಿನ ರಕ್ಷಣೆ ಒದಗಿಸುತ್ತವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...