alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಏರಿಕೆಯಾಯ್ತು ಮೊಬೈಲ್, ಟಿ.ವಿ. ಆಮದು ಸುಂಕ

ನವದೆಹಲಿ: ದೇಶೀಯ ಉತ್ಪಾದಕರ ಹಿತಾಸಕ್ತಿ ಕಾಪಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಮೊಬೈಲ್, ಟಿ.ವಿ. ಸೇರಿದಂತೆ ವಿದ್ಯುತ್ ಉಪಕರಣಗಳ ಆಮದು ಸುಂಕ ಹೆಚ್ಚಳ ಮಾಡಿದೆ.

ಸ್ಮಾರ್ಟ್ ಫೋನ್, ಟಿ.ವಿ., ಮೈಕ್ರೋವೇವ್, ಎಲ್.ಇ.ಡಿ. ಲ್ಯಾಂಪ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಕೆ ಮಾಡಲಾಗಿದೆ. ಮೊದಲು ವಿದೇಶಗಳಿಂದ ಆಮದಾಗುವ ಸ್ಮಾರ್ಟ್ ಫೋನ್ ಗಳಿಗೆ ಯಾವುದೇ ಆಮದು ಸುಂಕ ವಿದಿಸುತ್ತಿರಲಿಲ್ಲ.

ದೇಶೀಯ ಉತ್ಪಾದಕರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಸ್ಮಾರ್ಟ್ ಫೋನ್ ಗಳಿಗೆ ಶೇ. 15 ರಷ್ಟು ಆಮದು ಸುಂಕ ವಿದಿಸಲು ಸರ್ಕಾರ ತೀರ್ಮಾನಿಸಿದೆ. ಟಿ.ವಿ.ಗಳ ಮೇಲಿನ ಆಮದು ಸುಂಕವನ್ನು ಶೇ. 20 ರಷ್ಟು ಏರಿಕೆ ಮಾಡಲಾಗಿದೆ.

ಅದೇ ರೀತಿ, ಮೈಕ್ರೋವೇವ್, ಎಲ್.ಇ.ಡಿ. ಲ್ಯಾಂಪ್, ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ಆಮದು ಸುಂಕವನ್ನು ಶೇ. 20 ರಷ್ಟು ಏರಿಕೆ ಮಾಡಲಾಗಿದೆ.

ಆಮದು ಸುಂಕ ಏರಿಕೆಯಿಂದ ಬೆಲೆ ಏರಿಕೆಯಾಗಲಿದೆ. ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಟೆಲಿಕಾಂ ಸೇವಾ ಕಂಪನಿಗಳ ಮೇಲೆ ಇದು ಪರಿಣಾಮ ಬೀರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...