alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗಿಗಾ ಫೈಬರ್ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್

ರಿಲಯನ್ಸ್ ಇಂಡಸ್ಟ್ರಿ 41ನೇ ವಾರ್ಷಿಕ ಸಭೆಯಲ್ಲಿ ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಬಗ್ಗೆ ಅಧಿಕೃತ ಹೇಳಿಕೆ ನೀಡಿತ್ತು. ಆಗಸ್ಟ್ 15ರಿಂದ ಮುಂಗಡ ಬುಕ್ಕಿಂಗ್ ಕೆಲಸ ಕೂಡ ಶುರುವಾಗಿದೆ. ಶೀಘ್ರವೇ ಜಿಯೋ ಗಿಗಾ ಫೈಬರ್ ಮನೆಯಲ್ಲಿ ರಾರಾಜಿಸಲಿದೆ ಎಂದುಕೊಂಡಿದ್ದವರಿಗೆ ಕಂಪನಿ ನಿರಾಸೆ ಮೂಡಿಸಿದೆ.

ಟಿವಿ, ಬ್ರಾಡ್ಬ್ಯಾಂಡ್, ಲ್ಯಾಂಡ್ಲೈನ್ ಸೇವೆಯನ್ನು ಒಟ್ಟಿಗೆ ನೀಡುವ ಜಿಯೋ ಗಿಗಾ ಫೈಬರ್ ಯಾವಾಗ ಬರುತ್ತೆ ಎಂಬ ಕುತೂಹಲ ಜನರಿಗಿದೆ. ಈಗಾಗಲೇ ಅನೇಕರು ಹೆಸರು ನೋಂದಾಯಿಸಿದ್ದಾರೆ. ಆದ್ರೆ ಕಂಪನಿ ಮಾತ್ರ ಸಂಪರ್ಕ ನೀಡುವ ಬಗ್ಗೆ ಯಾವುದೇ ದಿನಾಂಕವನ್ನು ನಮೂದಿಸಿಲ್ಲ. ನೋಂದಾಯಿತ ಗ್ರಾಹಕರ ಸಮೀಕ್ಷೆ ನಡೆಸಲಾಗ್ತಿದೆ. ನಿಜವಾಗ್ಲೂ ಗ್ರಾಹಕರು ಗಿಗಾ ಫೈಬರ್ ಬಳಸಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಪಡೆಯುತ್ತಿದೆ. ಗಿಗಾ ಫೈಬರ್ ಜಾರಿಗೆ ಬರಲು ಇನ್ನೂ ಮೂರು ತಿಂಗಳ ಬೇಕೆಂದು ಮೂಲಗಳು ಹೇಳ್ತಿವೆ.

ಸರ್ವೆಯಲ್ಲಿ ಫಲಿತಾಂಶ ಕೆಟ್ಟದಾಗಿ ಬಂದ್ರೆ ಗಿಗಾ ಫೈಬರ್ ಸೇವೆಯನ್ನು ರದ್ದು ಮಾಡೋದಿಲ್ಲ. ಇದೊಂದು ಸರ್ವೆ ಮಾತ್ರ. ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಹಾಗೂ ಸರ್ವೆಗೆ ಯಾವುದೇ ಸಂಬಂಧವಿಲ್ಲ. ಗಿಗಾ ಫೈಬರ್ ನಲ್ಲಿ ಗ್ರಾಹಕರಿಗೆ 600 ಕ್ಕೂ ಹೆಚ್ಚು ಹೆಚ್ ಡಿ ಚಾನೆಲ್ ಲಭ್ಯವಾಗಲಿದೆ. ಇದಕ್ಕಾಗಿ ರಿಲಯನ್ಸ್ ಸೆಟ್ ಅಪ್ ಬಾಕ್ಸ್ ಸಿಗಲಿದೆ. ಈಗಾಗಲೇ ಜಿಯೋ ಆರಂಭಿಕ ಪ್ಲಾನ್ ಬಿಡುಗಡೆ ಮಾಡಿದೆ. 500 ರೂಪಾಯಿಯಿಂದ 1500 ರೂಪಾಯಿಯ ಪ್ಲಾನ್ ಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...