alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಮಾಲೀಕರಿಗೊಂದು ಮಾಹಿತಿ….

card

ನವದೆಹಲಿ: ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ವಹಿವಾಟಿನ ಮೇಲೆ, ಶೇ. 1 ರಷ್ಟು ಸೇವಾ ಶುಲ್ಕ ಹಾಕುವುದನ್ನು ವಿರೋಧಿಸಿ, ಮಾಲೀಕರು ಕಾರ್ಡ್ ಗಳನ್ನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಬಳಿಕ ಪರಿಸ್ಥಿತಿ ತಿಳಿಯಾಗಿ ಜನವರಿ 13 ರ ವರೆಗೂ ಕಾರ್ಡ್ ಸ್ವೀಕರಿಸಲು ತೀರ್ಮಾನಿಸಲಾಗಿತ್ತು.

ಬ್ಯಾಂಕ್ ಗಳು ಶೇ. 1 ರಷ್ಟು ಸೇವಾ ಶುಲ್ಕ ವಿಧಿಸುವುದಕ್ಕೆ ಬಂಕ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ನಿರ್ಧಾರದಿಂದ ಬ್ಯಾಂಕ್ ಗಳು ಹಿಂದೆ ಸರಿದಿದ್ದರಿಂದ, ಬಂಕ್ ಮಾಲೀಕರು ಜನವರಿ 13 ರ ವರೆಗೆ ಕಾರ್ಡ್ ಸ್ವೀಕರಿಸಲು ಸಮ್ಮತಿಸಿದ್ದರು.

ಈ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಪೆಟ್ರೋಲ್ ಬಂಕ್ ಮಾಲೀಕರು ಅಥವಾ ಗ್ರಾಹಕರು ಡಿಜಿಟಲ್ ವಹಿವಾಟಿನ ಹೆಚ್ಚುವರಿ ಶುಲ್ಕವನ್ನು ಭರಿಸಬೇಕಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಬ್ಯಾಂಕ್ ಮತ್ತು ತೈಲ ಕಂಪನಿಗಳಿಗೆ ಸಂಬಂಧಿಸಿದ ವಿಚಾರ ಇದಾಗಿದ್ದು, ಹೊರೆಯನ್ನು ಯಾರು ಹೊರಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಜನವರಿ 13 ರ ನಂತರವೂ ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...