alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್ಲೆಸ್ ಇಫೆಕ್ಟ್: ಜನರ ಕೈ ಸೇರಿದೆ 18.5 ಲಕ್ಷ ಕೋಟಿ ನಗದು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಯಾಶ್ಲೆಸ್ ಹಾಗೂ ಕಡಿಮೆ ನಗದು ಬಳಕೆ ಆಶಯ ಈಡೇರಿದಂತೆ ಕಾಣ್ತಿಲ್ಲ. ಇದಕ್ಕೆ ವಿರುದ್ಧವಾಗಿ ಸದ್ಯ ಮಾರುಕಟ್ಟೆಯಲ್ಲಿ ನಗದಿನ ಪ್ರಮಾಣ ಮೊದಲಿಗಿಂತ ಒಂದು ಪಟ್ಟು ಜಾಸ್ತಿಯಿದೆ. ಆರ್ ಬಿ ಐ ಅಂಕಿ-ಅಂಶದ ಪ್ರಕಾರ ದೇಶದ ಜನರ ಬಳಿ 18.5 ಲಕ್ಷ ಕೋಟಿ ನಗದಿದೆಯಂತೆ. 2016ರ ನೋಟು ನಿಷೇಧದ ವೇಳೆ ಜನರ ಬಳಿ 7.8 ಲಕ್ಷ ಕೋಟಿ ಹಣವಿತ್ತು ಎಂದು ಆರ್ ಬಿ ಐ ಹೇಳಿದೆ.

ರಿಸರ್ವ್ ಬ್ಯಾಂಕ್ ಒಟ್ಟು 19.3 ಲಕ್ಷ ಕೋಟಿ ನಗದನ್ನು ವಿನಿಮಯಕ್ಕಿಟ್ಟಿದೆ. ನೋಟು ನಿಷೇಧದ ವೇಳೆ ಇದ್ರ ಮೊತ್ತ 8.9 ಲಕ್ಷ ಕೋಟಿಯಾಗಿತ್ತು. ನೋಟು ನಿಷೇಧದ ವೇಳೆ ಜಿಡಿಪಿಗೆ ಹೋಲಿಕೆ ಮಾಡಿದ್ರೆ ನೋಟಿನ ಪ್ರಮಾಣ ಕಡಿಮೆಯಿತ್ತು. ಅತಿ ಹೆಚ್ಚು ಹಣ ಜನರ ಕೈನಲ್ಲಿದೆ ಅಂದ್ರೆ ಬ್ಯಾಂಕ್ ನಲ್ಲಿದ್ದ ಹಣವನ್ನು ಜನರು ಡ್ರಾ ಮಾಡ್ತಿದ್ದಾರೆ ಎಂದರ್ಥ.

ನೋಟು ನಿಷೇಧದ ವೇಳೆ ಮೋದಿ ದೇಶವನ್ನು ಡಿಜಿಟಲ್ ಮಾಡುವುದಾಗಿ ಹೇಳಿದ್ದರು. ನೋಟು ರಹಿತ ದೇಶದ ನಿರ್ಮಾಣ ನಮ್ಮ ಗುರಿ ಎಂದಿದ್ದರು. ಕೆಲ ತಿಂಗಳ ಹಿಂದೆ ದೇಶದ ಕೆಲ ಎಟಿಎಂಗಳಲ್ಲಿ ಹಣವಿಲ್ಲ. ಬ್ಯಾಂಕ್ ನಲ್ಲಿ ಹಣದ ಸಂಗ್ರಹ ಕಡಿಮೆಯಾದ ಕಾರಣ ಎಟಿಎಂಗಳು ಖಾಲಿಯಾಗಿವೆ ಎಂಬ ಸುದ್ದಿ ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...