alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂಪಾಯಿ ನಾಣ್ಯ ಸ್ವೀಕರಿಸಲು ಅಪ್ಪಿತಪ್ಪಿಯೂ ನಿರಾಕರಿಸಬೇಡಿ

ಹತ್ತು ರೂಪಾಯಿ ನಾಣ್ಯದ ಕುರಿತಂತೆ ಹಲವಾರು ವದಂತಿಗಳು ಈ ಹಿಂದೆ ಹರಡಿದ್ದವು. ಈ ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂಬ ಸುಳ್ಳು ವದಂತಿಯ ಕಾರಣಕ್ಕಾಗಿ ವ್ಯಾಪಾರಸ್ಥರು 10 ರೂ. ನಾಣ್ಯವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು.

ಸ್ವತಃ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಹತ್ತು ರೂ. ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲಾಗಿಲ್ಲ. ಇದನ್ನು ಸ್ವೀಕರಿಸಲು ನಿರಾಕರಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರೂ ಈಗಲೂ ಸಹ ಬಹಳಷ್ಟು ಮಂದಿ 10 ರೂ. ನಾಣ್ಯ ಸ್ವೀಕರಿಸಲು ಹಿಂಜರಿಯುತ್ತಾರೆ. ಇಂಥವರಿಗೆ ಅನ್ವಯಿಸುವ ಸುದ್ದಿಯೊಂದು ಇಲ್ಲಿದೆ.

10 ರೂ. ನಾಣ್ಯವನ್ನು ಸ್ವೀಕರಿಸದ ಅಂಗಡಿ ಮಾಲೀಕನೊಬ್ಬನಿಗೆ ನ್ಯಾಯಾಲಯ, 200 ರೂ. ದಂಡ ವಿಧಿಸಿದೆಯಲ್ಲವೇ ಈ ನಾಣ್ಯ ಚಲಾವಣೆಯಲ್ಲಿಲ್ಲ ಎಂದು ಗ್ರಾಹಕನಿಗೆ ಸುಳ್ಳು ಹೇಳಿದ್ದಕ್ಕೆ ಒಂದು ದಿನದ ಮಟ್ಟಿಗೆ ಕೋರ್ಟ್ ನಲ್ಲೇ ಇರಬೇಕೆಂಬ ಶಿಕ್ಷೆ ವಿಧಿಸಿದೆ.

ಮಧ್ಯಪ್ರದೇಶದ ಮೊರೆನಾದಲ್ಲಿ ಈ ಘಟನೆ ನಡೆದಿದ್ದು, 2017 ರ ಅಕ್ಟೋಬರ್ 17 ರಂದು ಗ್ರಾಹಕರೊಬ್ಬರು ಅಂಗಡಿಯೊಂದರಲ್ಲಿ ಎರಡು ಕರವಸ್ತ್ರಗಳನ್ನು ಖರೀದಿಸಿ 10 ರೂ. ನ ಎರಡು ನಾಣ್ಯಗಳನ್ನು ನೀಡಿದ್ದರು.

ಇದನ್ನು ಸ್ವೀಕರಿಸಲು ನಿರಾಕರಿಸಿದ ಅಂಗಡಿ ಮಾಲೀಕ, 10 ರೂ. ನಾಣ್ಯ ಚಲಾವಣೆಯಲ್ಲಿಲ್ಲ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಅಂಗಡಿಯ ಮಾಲೀಕನ ವಿರುದ್ಧ ಗ್ರಾಹಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು, ಮೊರೆನಾ ಜಿಲ್ಲಾ ನ್ಯಾಯಾಲಯ, ಅಂಗಡಿ ಮಾಲೀಕನಿಗೆ ದಂಡ ಹಾಗೂ ಶಿಕ್ಷೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...