alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ GST ಕೌನ್ಸಿಲ್

ನವದೆಹಲಿ: ಏರಿಕೆಯ ಹಾದಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿ.ಎಸ್.ಟಿ. ಅಡಿ ತಂದರೆ ಬೆಲೆ ಇಳಿಕೆಯಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದಕ್ಕೆ ಪೂರಕವಾದ ಸ್ಪಂದನೆ ಜಿ.ಎಸ್.ಟಿ. ಮಂಡಳಿಯಿಂದ ಸಿಕ್ಕಿದೆ. ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳು ಸೇರಿ ಇನ್ನಿತರೆ ಸರಕು ಮತ್ತು ಸೇವೆಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಲು ಪರಿಗಣಿಸಲಾಗಿದೆ ಎಂದು ಜಿ.ಎಸ್.ಟಿ. ಕೌನ್ಸಿಲ್ ಪ್ರಮುಖರಾದ ಬಿಹಾರದ ಹಣಕಾಸು ಖಾತೆ ಸಚಿವ ಸುಶೀಲ್ ಮೋದಿ ತಿಳಿಸಿದ್ದಾರೆ.

ವಿದ್ಯುತ್, ರಿಯಲ್ ಎಸ್ಟೇಟ್, ಸ್ಟಾಂಪ್ ಡ್ಯೂಟಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಜಿ.ಎಸ್.ಟಿ.(ಸರಕು ಮತ್ತು ಸೇವಾ ತೆರಿಗೆ)ಯ ಭಾಗವಾಗಬೇಕೆಂಬುದು ನಮ್ಮ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ. ಅಡಿ ತಂದರೆ ರಾಜ್ಯಗಳ ಆದಾಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಇದರ ಜೊತೆಗೆ ಪ್ರಸ್ತುತ ಇರುವ ಜಿ.ಎಸ್.ಟಿ. ತೆರಿಗೆ ಸ್ಲ್ಯಾಬ್ ಗಳನ್ನು ಕಡಿಮೆ ಮಾಡುವ ಬಗ್ಗೆ ಅವರು ಸುಳಿವು ನೀಡಿದ್ದಾರೆ. ತೆರಿಗೆ ಸಂಗ್ರಹ ಸ್ಥಿರವಾದ ನಂತರ ಜಿ.ಎಸ್.ಟಿ. ತೆರಿಗೆ ಹಂತಗಳನ್ನು ಕಡಿಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...