alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಇಲ್ಲಿದೆ ಒಂದು ಮಾಹಿತಿ

card-rade

ನವದೆಹಲಿ: ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರಕ್ಕೆ, ಶೇ. 1 ರಷ್ಟು ಶುಲ್ಕ ವಿಧಿಸುವುದನ್ನು ಬಂಕ್ ಮಾಲೀಕರು ವಿರೋಧಿಸಿದ್ದರು.

ಬಂಕ್ ಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ಬಳಸದಿರಲು ತೀರ್ಮಾನ ಕೈಗೊಂಡಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು.

ಅದರಂತೆ ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದಲ್ಲಿ ಅದರ ಮೇಲಿನ ವಹಿವಾಟು ಶುಲ್ಕವನ್ನು ಬ್ಯಾಂಕ್ ಗಳು ಮತ್ತು ತೈಲ ಕಂಪನಿಗಳು ಭರಿಸಲಿವೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಗ್ರಾಹಕರು ಮತ್ತು ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ಶುಲ್ಕವನ್ನು ಹೇರುವುದಿಲ್ಲ. ಬ್ಯಾಂಕ್ ಮತ್ತು ತೈಲ ಕಂಪನಿಗಳು ಶುಲ್ಕವನ್ನು ಭರಿಸಲಿದ್ದು, ಯಾರು ಎಷ್ಟು ಪ್ರಮಾಣದ ಶುಲ್ಕ ಭರಿಸಲಿವೆ ಎಂಬುದನ್ನು ಶೀಘ್ರವೇ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...