alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಬ್ಯಾಟರಿ ಚಾರ್ಜ್ ತಿಂದು ಹಾಕುತ್ವೆ ಈ ಆ್ಯಪ್ಸ್

ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೊನ್ ಮಾಮೂಲಿ. ಸ್ಮಾರ್ಟ್ಫೋನ್ ಇಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಫೇಸ್ಬುಕ್, ಮೆಸ್ಸೇಜ್, ವಾಟ್ಸ್ ಅಪ್ ಹೀಗೆ ಒಂದಾದ ಮೇಲೆ ಒಂದರಲ್ಲಿ ಚಾಟ್ ಮಾಡ್ತಾ ಜನರು ಮೊಬೈಲ್ ನಲ್ಲಿಯೇ ಮುಳುಗಿ ಹೋಗ್ತಾರೆ. ಆದ್ರೆ ಅವಶ್ಯವಿರುವಾಗ ಈ ಮೊಬೈಲ್ ಕೈಕೊಡೋದು ಜಾಸ್ತಿ. ಫುಲ್ ಚಾರ್ಜ್ ಇದ್ದ ಮೊಬೈಲ್ ಬ್ಯಾಟರಿ ಒಂದೇ ಬಾರಿ 10 ಪರ್ಸೆಂಟ್ ಗೆ ಬಂದು ನಿಲ್ಲುವುದುಂಟು. ಇದಕ್ಕೆ ಏನು ಕಾರಣ ಅಂತಾ ಅನೇಕರು ತಲೆ ಕೆಡಿಸಿಕೊಳ್ತಾರೆ.

ಮೊಬೈಲ್ ಬ್ಯಾಟರಿ ಡೌನ್ ಆಗಲು ನಿಮ್ಮ ಮೊಬೈಲ್ ನಲ್ಲಿರುವ ಆ್ಯಪ್ ಗಳೇ ಮುಖ್ಯ ಕಾರಣ. ಕೆಲ ಆ್ಯಪ್ ಗಳು ನಿಮ್ಮ ಮೊಬೈಲ್ ಬ್ಯಾಟರಿಯನ್ನು ನುಂಗಿ ನೀರು ಕುಡಿಯುತ್ವೆ.

ಟಿಂಡರ್ : ಸಾಮಾಜಿಕ ಜೀವನದಲ್ಲಿ ನಿಮ್ಮನ್ನು ಟಿಂಡರ್ ಆ್ಯಕ್ಟಿವ್ ಆಗಿರಿಸುತ್ತೆ ನಿಜ. ಮೊಬೈಲ್ ವಿಚಾರಕ್ಕೆ ಬಂದ್ರೆ ಇದು ಕೆಟ್ಟ ಅಪ್ಲಿಕೇಷನ್ ಅಂದ್ರೆ ತಪ್ಪಾಗಲ್ಲ. ಇದು ನಿಮ್ಮ ಬ್ಯಾಟರಿ ಚಾರ್ಜ್ ಇಳಿಸೋದ್ರಲ್ಲಿ ಮುಂದಿದೆ.

ಸ್ಯ್ನಾಪ್ ಚಾಟ್ : ಸಮೀಕ್ಷೆ ಪ್ರಕಾರ ಅತಿ ಹೆಚ್ಚು ಚಾರ್ಜ್ ತಿನ್ನುವ ಮೊಬೈಲ್ ಆ್ಯಪ್ ಪಟ್ಟಿಯಲ್ಲಿ ಸ್ಯ್ನಾಪ್ ಚಾಟ್ ಹೆಸರೂ ಇದೆ. ಬ್ಯಾಟರಿ ಬಹಳ ಹೊತ್ತು ಬರಬೇಕೆಂದಾದ್ರೆ ಸ್ಯ್ನಾಪ್ ಚಾಟ್ ಆ್ಯಪನ್ನು ಅನ್ ಇನ್ಸ್ಟಾಲ್ ಮಾಡಿ ಎನ್ನುತ್ತಾರೆ ತಜ್ಞರು.

ಮೈಕ್ರೋಸಾಫ್ಟ್ ಔಟ್ಲುಕ್ : ಅನೇಕರು ಮೈಕ್ರೋಸಾಫ್ಟ್ ಔಟ್ಲುಕ್ ಬಳಸ್ತಾರೆ. ಆದ್ರೆ ಈ ಆ್ಯಪ್ ಕೂಡ ನಿಮ್ಮ ಬ್ಯಾಟರಿ ಚಾರ್ಜ್ ಇಳಿಸೋದ್ರಲ್ಲಿ ಮುಂದಿದೆ.

ಫೇಸ್ಬುಕ್ ಮತ್ತು ಮೆಸ್ಸೆಂಜರ್ : ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಫೇಸ್ಬುಕ್ ನಿಮ್ಮ ಮೊಬೈಲ್ ಬ್ಯಾಟರಿಗೆ ಶತ್ರು. ಇದ್ರ ಜೊತೆಗೆ ಮೆಸ್ಸೆಂಜರ್ ಕೂಡ ಬ್ಯಾಟರಿ ಚಾರ್ಜ್ ಇಳಿಸುವ ಆ್ಯಪ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಯುಟ್ಯೂಬ್ : ಯುಟ್ಯೂಬ್ ಕೂಡ ನಿಮ್ಮ ಮೊಬೈಲ್ ನ ಶತ್ರು. ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಚಾರ್ಜನ್ನು ಬೇಗ ಇಳಿಸುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...