alex Certify
ಕನ್ನಡ ದುನಿಯಾ       Mobile App
       

Kannada Duniya

ಹುಷಾರ್…! ಸಂಸ್ಥೆಯ ಮಾಹಿತಿ ಕದ್ದರೆ ಜೈಲು ಪಾಲು

ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಸ್ಥೆಯ ಮಾಹಿತಿಯ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದ್ರೆ ಅವರು ಕೂಡ ಜೈಲು ಶಿಕ್ಷೆಯನ್ನ ಎದುರಿಸಬೇಕಾದ ಸಾಧ್ಯತೆ ಇದೆ.

ಹೌದು, ಒಂದು ಸಂಸ್ಥೆಯ ಉದ್ಯೋಗಿಗಳ ಮಾಹಿತಿಯನ್ನು ಕದ್ದದ್ದು ಸಾಬೀತಾದ ಪಕ್ಷದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಕಾನೂನನ್ನು ಜಾರಿಗೆ ತರೋದಕ್ಕೆ ಶಿಫಾರಸ್ಸು ಸಲ್ಲಿಸಲಾಗಿದೆ. ಅಷ್ಟೇ ಅಲ್ಲ ಮೂರು ಲಕ್ಷ ರೂಪಾಯಿಗಳ ದಂಡವನ್ನು ತೆರಬೇಕಾಗುತ್ತದೆ.

ಕೇಂದ್ರದಿಂದ ರಚನೆಯಾಗಿರುವ ಬಿ.ಎ. ಕೃಷ್ಣ ಕಮಿಟಿ ಸಲ್ಲಿಸಿರುವ ಹಲವು ಶಿಫಾರಸ್ಸುಗಳ ಪೈಕಿ ಇದೂ ಒಂದಾಗಿದೆ. ಆಯಾ ಸಂಸ್ಥೆಗಳ ಮಾಹಿತಿ ಕಳುವಾಗದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆ ಸಂಸ್ಥೆಗಳ ಮೇಲೆ ಇದೆ. ಒಂದು ವೇಳೆ ದತ್ತಾಂಶಗಳ ಮಾಹಿತಿಯನ್ನ ಉದ್ದೇಶಪೂರ್ವಕವಾಗಿ ಕಳವು ಮಾಡಿದ ಪಕ್ಷದಲ್ಲಿ ಅಂತ ಪ್ರಕರಣಗಳನ್ನ ಜಾಮೀನು ರಹಿತ ಅಪರಾಧ ಪ್ರಕರಣಗಳ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ.

ಗೂಗಲ್, ಫೇಸ್ಬುಕ್, ಟ್ವಿಟ್ಟರ್ ಖಾತೆಗಳಲ್ಲಿ ಸಾರ್ವಜನಿಕರ ಮಾಹಿತಿ ಕಳುವಾಗುತ್ತಿರುವ ಹಿನ್ನಲೆಯಲ್ಲಿ ಹೀಗೊಂದು ಕಾನೂನನ್ನು ಜಾರಿಗೆ ತರೋದಕ್ಕೆ ಕೇಂದ್ರ ಚಿಂತನೆ ನಡೆಸುತ್ತಿದೆ. ಪಾಸ್ವಾರ್ಡ್, ಲೈಂಗಿಕ ಆದ್ಯತೆಗಳು, ಜಾತಿ , ಧರ್ಮ, ಆಧಾರ್ ನಂಬರ್ ಮತ್ತು ಆದಾಯ ತೆರಿಗೆ ಇಲಾಖೆಯ ಮಾಹಿತಿ ಸೇರಿದಂತೆ ಹಲವು ಮಾಹಿತಿಯ ಕಳವು ಶಿಕ್ಷಾರ್ಹ ಅಪರಾಧವಾಗಲಿದೆ. ಸಂಸ್ಥೆಗಳು ಕೂಡ ಈ ಅಪರಾಧದಲ್ಲಿ ಪಾಲುದಾರಿಕೆಯ ಹೊಣೆ ಹೊರಬೇಕಾಗಿ ಬರಲಿದೆ ಅಂತ ಕೃಷ್ಣ ಕಮಿಟಿ ಶಿಫಾರಸ್ಸು ಸಲ್ಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...