alex Certify
ಕನ್ನಡ ದುನಿಯಾ       Mobile App
       

Kannada Duniya

12 ಗಂಟೆಯಲ್ಲಿ ತಲೆ ಎತ್ತುವ ಈ ಮನೆ ಬೆಲೆ 6 ಲಕ್ಷ

ಒಂದು ಮನೆ ನಿರ್ಮಾಣಕ್ಕೆ ಹೆಚ್ಚೆಂದ್ರೂ 2-3 ತಿಂಗಳ ಹಿಡಿಯುತ್ತದೆ. ಆದ್ರೆ ಕೇವಲ 12ರಿಂದ 24 ಗಂಟೆಯೊಳಗೆ ನಿಮ್ಮ ಕನಸಿನ ಮನೆ ಕಣ್ಮುಂದಿರುತ್ತದೆ ಎಂದ್ರೆ ನೀವು ನಂಬಲೇಬೇಕು. ಸ್ಟಾರ್ಟ್ ಅಪ್ ಕಂಪನಿಯೊಂದು ಇದನ್ನು ಮಾಡಿ ತೋರಿಸಿದೆ.

ಕಡಿಮೆ ವೆಚ್ಛದಲ್ಲಿ 3ಡಿ ತಂತ್ರಜ್ಞಾನ ಅಳವಡಿಸಿಕೊಂಡು ಕೇವಲ 12 ಗಂಟೆಯಲ್ಲಿ ಮನೆ ನಿರ್ಮಾಣ ಮಾಡುತ್ತಿದೆ. ಈ ಸ್ಟಾರ್ಟ್ ಅಪ್ ಕಂಪನಿ ಹೆಸರು ಐಕಾನ್. 650 ಚದರ ಅಡಿಯ ಮನೆಯನ್ನು ಸಿಮೆಂಟ್ ಬಳಸಿ ಕಂಪನಿ ಕೇವಲ 12-24 ಗಂಟೆಯೊಳಗೆ ನಿರ್ಮಾಣ ಮಾಡುತ್ತದೆ.

ಈ ತಂತ್ರಜ್ಞಾನ ಈಗ ಪ್ರಸಿದ್ಧಿ ಪಡೆಯುತ್ತಿದೆ. ಕಂಪನಿ ಕಡಿಮೆ ವೆಚ್ಛದ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಇದಕ್ಕೆ ಬಳಸುತ್ತಿದೆ.ಕಂಪನಿ ಮನೆ ತಯಾರಿಸಲು Vulcan  ಪ್ರಿಂಟರ್ ಬಳಸುತ್ತಿದೆ. ಈ ತಂತ್ರಜ್ಞಾನ ಬಳಸಿ ಕಂಪನಿ ಒಂದು ಲೀವಿಂಗ್ ರೂಂ, ಮಲಗುವ ಕೋಣೆ, ಬಾತ್ ರೂಂ ಹಾಗೂ ಮುಖಮಂಟಪವನ್ನು ನಿರ್ಮಾಣ ಮಾಡುತ್ತದೆ. 650 ಚದರ ಅಡಿ ಮನೆ ನಿರ್ಮಾಣಕ್ಕೆ ಕಂಪನಿ 6 ಲಕ್ಷ ರೂಪಾಯಿ ಕೇಳ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 2.5 ಲಕ್ಷಕ್ಕೆ ಇಳಿಸುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...