alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ಉದ್ಯಮ ಪ್ರವೇಶಿಸಲು ಸಜ್ಜಾಗಿದೆ ರಿಲಯೆನ್ಸ್

ಭಾರತದ ಉದ್ಯಮ ಕ್ಷೇತ್ರದಲ್ಲೀಗ ಬಿರುಸಿನ ಪೈಪೋಟಿ ನಡೆಯುತ್ತಿದೆ. ಆನ್ ಲೈನ್ ರಿಟೇಲ್ ಮಾರುಕಟ್ಟೆಯನ್ನು ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಆಳುತ್ತಿವೆ. ಬಿಲಿಯನ್ ಡಾಲರ್ ಗಟ್ಟಲೆ ವಹಿವಾಟು ನಡೆಸುತ್ತಿವೆ. ಆದ್ರೆ ಇ-ಕಾಮರ್ಸ್ ಪಾಲು ಶೇ.3-4ರಷ್ಟು ಮಾತ್ರ.

ಹಾಗಾಗಿ 2018ರಲ್ಲಿ ಮುಖೇಶ್ ಅಂಬಾನಿ ಕೂಡ ಆನ್ ಲೈನ್ ಉದ್ಯಮಕ್ಕೆ ಎಂಟ್ರಿ ಕೊಡಲಿದ್ದಾರೆ. ಅಗ್ಗದ ಬೆಲೆಯಲ್ಲಿ ಮೊಬೈಲ್ ಆಫರ್ ಕೊಟ್ಟು ಸಂಚಲನ ಮೂಡಿಸಿರೋ ಅಂಬಾನಿ, ಆನ್ ಲೈನ್ ನಲ್ಲೂ ಮೋಡಿ ಮಾಡುವ ನಿರೀಕ್ಷೆ ಇದೆ. ಟೆಲಿಕಾಂ ವಲಯದಂತೆ ಆನ್ ಲೈನ್ ನಲ್ಲೂ ಅಂಬಾನಿ ಭಾರೀ ಪೈಪೋಟಿ ಒಡ್ಡೋದಂತೂ ನಿಶ್ಚಿತ.

2016ರಲ್ಲಿ ಜಿಯೋ ಮೂಲಕ ಮುಕೇಶ್ ಅಂಬಾನಿ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಈಗ ಜಿಯೋ ಮಾರುಕಟ್ಟೆಯ ಒಟ್ಟಾರೆ ಆದಾಯದಲ್ಲಿ ಶೇ.15ಷ್ಟು ಭಾಗವನ್ನು ಆವರಿಸಿಕೊಂಡಿದೆ. ಹಾಗಾಗಿ ಅಂಬಾನಿ ಎಂಟ್ರಿ ಆನ್ ಲೈನ್ ಕಂಪನಿಗಳಲ್ಲಿ ನಡುಕ ಹುಟ್ಟಿಸಿದ್ರೂ ಅಚ್ಚರಿಯಿಲ್ಲ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...