alex Certify
ಕನ್ನಡ ದುನಿಯಾ       Mobile App
       

Kannada Duniya

ಪತಂಜಲಿ ಮುಂದೆ ಸೋಲೊಪ್ಪಿಕೊಂಡ ಕೋಲ್ಗೇಟ್ ಸಿಇಒ

patanjali-ayurved

ಯೋಗ ಗುರು ಬಾಬಾ ರಾಮ್ದೇವ್ ಪತಂಜಲಿ ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಟೂತ್ಪೇಸ್ಟ್, ಟೂತ್ ಬ್ರೆಶ್ ಎಂದ ತಕ್ಷಣ ಕೋಲ್ಗೇಟ್ ಎನ್ನುತ್ತಿದ್ದವರು ತಮ್ಮ ಬ್ರ್ಯಾಂಡ್ ಬದಲಾಯಿಸಿದ್ದಾರೆ. ಇದನ್ನು ಸ್ವತಃ ಕೋಲ್ಗೇಟ್  ಕಂಪನಿಯ ಗ್ಲೋಬಲ್ ಸಿಇಒ ಇಯಾನ್ ಕುಕ್ ಒಪ್ಪಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಕಾನ್ಫರೆನ್ಸ್ ನಲ್ಲಿ ಹೂಡಿಕೆದಾರರ ಜೊತೆ ಈ ಬಗ್ಗೆ ಮಾತನಾಡಿದ ಕುಕ್, ಗ್ರಾಹಕರಲ್ಲಿ ಬದಲಾಗುತ್ತಿರುವ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಹಾರದ ತಂತ್ರವನ್ನು ಬದಲಾಯಿಸಬೇಕೆಂದಿದ್ದಾರೆ. ಪತಂಜಲಿಯ ದಂತಕಾಂತಿ ಟೂತ್ಪೇಸ್ಟ್ ನಿಂದಾಗಿ ಕೋಲ್ಗೇಟ್ ವ್ಯಾಪಾರದಲ್ಲಿ ಗಣನೀಯ ಇಳಿಕೆಯಾಗಿದೆಯಂತೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿ ಕಂಪನಿ ಇಷ್ಟು ಇಳಿಕೆ ಕಂಡಿದೆ ಎಂದು ಕುಕ್ ಹೇಳಿದ್ದಾರೆ.

ಹಿಂದಿನ ವರ್ಷ ಕೋಲ್ಗೇಟ್ ಟೂತ್ಪೇಸ್ಟ್ ಮಾರಾಟದಲ್ಲಿ ಶೇಕಡಾ 1.8ರಷ್ಟು ಇಳಿಕೆಯಾಗಿದೆ ಎಂದು ಕುಕ್ ಒಪ್ಪಿಕೊಂಡಿದ್ದಾರೆ. ಭಾರತೀಯರ ಆದ್ಯತೆ ಬದಲಾಗ್ತಿದ್ದು, ಅವರು ಪತಂಜಲಿಗೆ ಆಕರ್ಷಿತರಾಗುತ್ತಿದ್ದಾರೆಂದು ಕುಕ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...