alex Certify
ಕನ್ನಡ ದುನಿಯಾ       Mobile App
       

Kannada Duniya

ಮರದಿಂದಲೇ ತಯಾರಾಗಿದೆ ಈ ಬೈಸಿಕಲ್…!

ಅವಶ್ಯಕತೆ ಆವಿಷ್ಕಾರದ ತಾಯಿ ಅಂತಾರೆ. ಹಾಗೆಯೇ ಕೊಯಮತ್ತೂರಿನ ಈ ವ್ಯಕ್ತಿ ಮರದ ಬೈಸಿಕಲ್ ಆವಿಷ್ಕಾರಕ್ಕೆ ಅತನಿಗಿದ್ದ ಅವಶ್ಯಕತೆಯೇ ಕಾರಣವಾಗಿದೆ.

ಇಂಟೀರಿಯರ್ ಡಿಸೈನರ್ ಆಗಿರುವ 33 ವರ್ಷದ ಪಿ.ಕೆ. ಮುರುಗೇಶನ್, ತಮ್ಮ ಬೈಸಿಕಲ್ ನ್ನು ಸಾಗಿಸುವಾಗ ಅದು ಹಾನಿಗೊಳಗಾಗಿತ್ತು. ಹೀಗಾಗಿ ಸೈಕಲ್ ನ ಹೊಸ ಚೌಕಟ್ಟಿಗಾಗಿ ತುಂಬಾ ಹುಡುಕಾಟ ನಡೆಸಿದ್ರು. ಆದ್ರೆ ಆ ಸೈಕಲ್ಲಿನ ಚೌಕಟ್ಟು ಸಿಗಲೇ ಇಲ್ಲ.

ಹೀಗಾಗಿ ಮರ ಬಳಸಿ ತನ್ನ ಬೈಸಿಕಲ್ ನ ಚೌಕಟ್ಟು ತಯಾರಿಕೆಗೆ ನಿರತರಾದ್ರು. ಹ್ಯಾಂಡಲ್ ಮತ್ತು ಸೀಟ್ ಬಿಟ್ಟು ಇಡೀ ಬೈಸಿಕಲ್ ನ್ನು ಸಂಪೂರ್ಣವಾಗಿ ಮರದಿಂದ ತಯಾರಿಸಲು ಮುರುಗೇಶನ್ ನಿರ್ಧರಿಸಿದ್ರು. ಹಾಗೆಯೇ ಪೆಟ್ರೋಲ್, ಡಿಸೇಲ್ ಉಗುಳಿ ಪರಿಸರವನ್ನು ಮಾಲಿನ್ಯ ಮಾಡದೇ ಇರುವ, ಮರದ ಬೈಸಿಕಲ್ ತಯಾರಿಸುವುದು ಇವರ ಉದ್ದೇಶವಾಗಿತ್ತು. ಅವರು ನಿರೀಕ್ಷಿಸಿದಂತೆ ಮರದ ಸೈಕಲ್ ತಯಾರಾಯ್ತು. ಅಂತೆಯೇ ಜನರನ್ನು ಕೂಡಾ ಆಕರ್ಷಿಸತೊಡಗಿತು.

ಮುರುಗೇಶನ್ ಅವರ ಮರದ ಬೈಸಿಕಲ್ ನೋಡಿ ತಮಗೂ ಒಂದು ಮಾಡಿಕೊಡುವಂತೆ ಜನರು ಕೇಳ್ತಿದ್ದಾರಂತೆ. ಒಂದು ಮರದ ಬೈಸಿಕಲ್ ತಯಾರಿಸಲು ಇವರಿಗೆ 15 ದಿನ ಬೇಕಾಗಿದ್ದು, 25 ಸಾವಿರ ರೂಪಾಯಿ ವೆಚ್ಚವಾಯ್ತಂತೆ.

ಆದ್ರೆ ಈ ಮರದ ಬೈಸಿಕಲ್ ವಿನ್ಯಾಸವನ್ನು ಮತ್ತಷ್ಟು ಸುಧಾರಿಸಲು ಯೋಚಿಸುತ್ತಿರುವ ಅವರು ಅದರ ವೆಚ್ಚವನ್ನು 18 ಸಾವಿರಕ್ಕೆ ಇಳಿಸುವ ಚಿಂತನೆಯಲ್ಲಿದ್ದಾರೆ. ಹಾಗೆಯೇ ಮುರುಗೇಶನ್ ತಮ್ಮದೇ ಒಂದು ಸಂಸ್ಥೆ ಸ್ಥಾಪಿಸಲು ಯೋಚಿಸುತ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...