alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಗುಜರಾತ್ ಜನರಿಗೆ ರಾಜ್ಯ ಸರ್ಕಾರ ಖುಷಿ ಸುದ್ದಿ ನೀಡಿದೆ. ದೀಪಾವಳಿಗೂ ಮೊದಲೇ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಅಗ್ಗವಾಗಿದೆ. ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ರ ಘೋಷಣೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ವಿಜಯ್ ರೂಪಾನಿ, ಪೆಟ್ರೋಲ್ ಹಾಗೂ ಡಿಸೇಲ್ ವ್ಯಾಟ್ ಕಡಿಮೆ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಇಂಧನದ ಮೇಲೆ ಶೇಕಡಾ 4ರಷ್ಟು ವ್ಯಾಟ್ ಕಡಿತಗೊಳಿಸಿರುವುದಾಗಿ ಅವರು ಹೇಳಿದ್ದಾರೆ.

ಈಗ ಗುಜರಾತ್ ನಲ್ಲಿ ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ 93 ಪೈಸೆ ಹಾಗೂ ಡಿಸೇಲ್ ನಲ್ಲಿ 2 ರೂಪಾಯಿ 75 ಪೈಸೆ ಕಡಿತವಾಗಿದೆ. ಇದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

ಈ ಹಿಂದೆ ಗುಜರಾತ್ ಸರ್ಕಾರ ಜಿಎಸ್ ಟಿ ದರವನ್ನು ಇಳಿಕೆ ಮಾಡಿತ್ತು. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈಗ ಪೆಟ್ರೋಲ್-ಡಿಸೇಲ್ ದರ ಇಳಿದಿದೆ. ಶೇಕಡಾ 5ರಷ್ಟು ವ್ಯಾಟ್ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಲಹೆ ನೀಡಿತ್ತು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...