alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕಾಸು ಮಾರುಕಟ್ಟೆ ಮೇಲೆ ಸೆಬಿ, ಆರ್‌ಬಿಐ ಬಿಗಿ ನಿಗಾ

ಹಣಕಾಸು ಮಾರುಕಟ್ಟೆಗಳಲ್ಲಿನ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇಡಲಾಗಿದೆ. ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ಹಾಗೂ ಸೆಬಿ ಹೇಳಿವೆ. ಈಕ್ವಿಟಿ ಹಾಗೂ ಸಾಲ ಮಾರುಕಟ್ಟೆಗಳಲ್ಲಿ ಶುಕ್ರವಾರ ಭಾರೀ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಎರಡು ನಿಯಂತ್ರಕ ಸಂಸ್ಥೆಗಳಿಂದ ಪ್ರತ್ಯೇಕವಾಗಿ ಈ ಹೇಳಿಕೆ ಹೊರಬಿದ್ದಿದೆ.

ಸೋಮವಾರವೂ ಷೇರುಪೇಟೆಯಲ್ಲಿ ಭಾರೀ ಪತನ ಉಂಟಾಗಲಿದೆ ಎಂಬ ಊಹಾಪೋಹಗಳ ಮಧ್ಯೆ ಈ ಎರಡು ಸಂಸ್ಥೆಗಳು ನೀಡಿರುವ ಹೇಳಿಕೆ ಏಕರೂಪದಲ್ಲಿವೆ. ಈ ನಡುವೆ ಸೋಮವಾರ ಮುಂಜಾನೆಯೂ ಮುಂಬೈ ಷೇರುಪೇಟೆ ಕುಸಿತದ ಹಾದಿಯಲ್ಲಿತ್ತು. ಆರಂಭದಲ್ಲೇ ಬಿಎಸ್‌ಇ 200 ಅಂಕಗಳ ಕುಸಿತ ಕಂಡಿದೆ. ಶುಕ್ರವಾರದಂದು ಬಿಎಸ್ಐ 1,127 ಅಂಕಗಳಷ್ಟು ಪತನ ದಾಖಲಿಸಿತ್ತು.

ಶುಕ್ರವಾರದಂದು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸಿದವರ ವಿವರ ನೀಡುವಂತೆ ಷೇರುಪೇಟೆಗೆ ಸೆಬಿ ಕೇಳಿದ್ದು, ಭಾರೀ ವ್ಯತ್ಯಯಕ್ಕೆ ಮೂಗುದಾರ ಹಾಕಲು ಮುಂದಾಗಲಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಸರ್ಕಾರಕ್ಕೆ ಕಳಂಕ ತರಲು ಕೆಲವು ನಿರ್ಲಜ್ಜ ಶಕ್ತಿಗಳು ಮಾರುಕಟ್ಟೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದೂ ವರದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...