alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಸಚಿವರು ಬೇಡ ಅಂತಿದ್ದಾರೆ ಪರಿಸರ ಸ್ನೇಹಿ ಕಾರ್

ಮಹಾರಾಷ್ಟ್ರ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿ ಈಗ ಮತ್ತೆ ಆದೇಶ ಹಿಂಪಡೆಯೋಕೆ ಚಿಂತನೆ ನಡೆಸಿದೆ. ಇದರ ನಡುವೆ ಮತ್ತೊಮ್ಮೆ ಸರ್ಕಾರವನ್ನ ಇದೇನಾ ನಿಮ್ಮ ಪರಿಸರ ಪ್ರಜ್ಞೆ ಅಂತ ಜನರು ಪ್ರಶ್ನೆ ಮಾಡುವ ಹಾಗೆ ಮಾಡಿಕೊಂಡಿದೆ.

ಸರ್ಕಾರ ನೀಡಿರುವ ಪರಿಸರ ಸ್ನೇಹಿ ಕಾರುಗಳು ನಮಗೆ ಬೇಡ ಅಂತ ಪಟ್ಟು ಹಿಡಿದು ಕೂತಿದ್ದಾರೆ ಮಹಾರಾಷ್ಟ್ರದ ಸಚಿವರು ಮತ್ತು ಉನ್ನತ ಅಧಿಕಾರಿಗಳು. ಮಹಾರಾಷ್ಟ್ರದ ಇಂಧನ ಇಲಾಖೆ ಅಧೀನದಲ್ಲಿರುವ ಎನರ್ಜಿ ಎಫಿಶಿಯನ್ಸಿ ಸರ್ವೀಸ್ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳಿಗೆ ವಾಹನ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಹೊಗೆ ರಹಿತ, ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ಕಾರುಗಳನ್ನ ಖರೀದಿಸಿದೆ.

ವೆರಿಟೋ ಮತ್ತು ಟಿಗೋರ್ ಕಾರುಗಳನ್ನ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸೇವೆಗೆ ಈಗಾಗ್ಲೇ ಒಂದಷ್ಟು ಕಾರುಗಳನ್ನ ನೀಡಲಾಗಿದೆ. ಆದರೆ ಈ ಕಾರುಗಳು ಮಾರುಕಟ್ಟೆಯಲ್ಲಿ ಸ್ಲೋ ಸೆಲ್ಲಿಂಗ್ ಕಾರುಗಳು ಮತ್ತು ಮೈಲೇಜ್ ಕೂಡ ಕಡಿಮೆ ಅನ್ನೋ ನೆಪ ಹೇಳಿ ನಮಗೆ ಬೇಡ ಅಂತ ಮೂಲೆಗೆ ತಳ್ಳಿದ್ದಾರೆ.

ಟಾಟಾ ಮತ್ತು ಮಹೀಂದ್ರಾ ಕಂಪನಿಗಳ ಪ್ರಕಾರ ಸಚಿವರುಗಳಿಗೆ ನೀಡಲಾಗಿರುವ ಕಾರುಗಳು ಒಂದು ಬಾರಿ ಚಾರ್ಜ್ ಮಾಡಿದ್ರೆ 80-82 ಕಿಲೋಮೀಟರ್ನಷ್ಟು ದೂರ ಚಲಿಸಬಹುದಾಗಿದೆ. ಮತ್ತೊಂದು ಮುಖ್ಯವಾದ ವಿಚಾರ ಏನಂದ್ರೆ ಸಚಿವರುಗಳಿಗೆ ನೀಡಲಾಗಿರುವ ಕಾರುಗಳ ಪೈಕಿ ಎರಡು ಮಾಡಲ್ ಗಳು 2019 ರಲ್ಲಿ ಲಾಂಚ್ ಆಗಲಿವೆ. ಹೀಗಿದ್ದರು ಸಚಿವರು ಅದ್ಯಾಕೆ ಪರಿಸರ ಸ್ನೇಹಿ ಕಾರುಗಳನ್ನ ದೂರ ತಳ್ತಿದ್ದಾರೆ ಅನ್ನೋದೇ ಯಕ್ಷಪ್ರಶ್ನೆಯಾಗಿಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...