alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರಾವಣ ಎಫೆಕ್ಟ್ : ಏರುತ್ತಿದೆ ಚಿಕನ್ ರೇಟ್

koli-masna

ಶ್ರಾವಣ ಮಾಸದಲ್ಲಿ ಕೆಲವರು ಮಾಂಸಾಹಾರ ಸೇವಿಸುವುದಿಲ್ಲ. ಶ್ರಾವಣ ಮಾಸ ಆರಂಭವಾಗಿ ಗಣಪತಿ ಹಬ್ಬ ಮುಗಿಯುವವರೆಗೂ ನಾನ್ ವೆಜ್ ಮುಟ್ಟಲ್ಲ.

ಹಾಗಾಗಿ ಆಷಾಢದಲ್ಲಿಯೇ ಹೆಚ್ಚಾಗಿ ನಾನ್ ವೆಜ್ ಬಳಸುತ್ತಾರೆ. ಇದರಿಂದಾಗಿ ಕೋಳಿ ಮಾಂಸದ ಬೆಲೆಯಲ್ಲಿ ಏರಿಕೆಯಾಗಿದೆ.

ಕಸಾಯಿಖಾನೆಗೆ ಜಾನುವಾರು ಮಾರಾಟ ನಿಷೇಧ ಕಾಯ್ದೆ, ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.), ಕೋಳಿ ಸಾಕಾಣೆ ವೆಚ್ಚ ಏರಿಕೆಯಾಗಿರುವುದು ಇವೇ ಮೊದಲಾದ ಕಾರಣದಿಂದ ಕೋಳಿಮಾಂಸದ ಬೆಲೆ ಏರಿಕೆಯಾಗಿದೆ.

ಬ್ರಾಂಡೆಡ್ ಚಿಕನ್ ಗೆ ಶೇ 12 ರಷ್ಟು ಜಿ.ಎಸ್.ಟಿ. ನಿಗದಿಯಾಗಿದೆ. ಜುಲೈ 1 ರಿಂದ ನಿರಂತರವಾಗಿ ಕೋಳಿ ಮಾಂಸದ ಬೆಲೆಯಲ್ಲಿ ಏರಿಕೆಯಾಗತೊಡಗಿದ್ದು, 230 ರೂ.ವರೆಗೂ ತಲುಪಿದೆ.

ಇನ್ನು ಕುರಿ ಮಾಂಸದ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಕೆ.ಜಿ.ಗೆ 50 ರೂ ವರೆಗೂ ಹೆಚ್ಚಾಗಿ, 425 ರೂ -450 ರೂ. ತಲುಪಿದೆ.

ನಾಟಿ ಕೋಳಿಗೂ ಡಿಮ್ಯಾಂಡ್ ಬಂದಿದ್ದು, ನಾಟಿ ಹುಂಜಕ್ಕೆ ಚಿನ್ನದ ಬೆಲೆ ಬಂದಿದೆ. ಮಾಂಸದ ಬೆಲೆ ಏರಿಕೆಯಾಗಿ ನಾನ್ ವೆಜ್ ಪ್ರಿಯರ ಬಾಯಿ ಸುಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...