alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಹಾರೆ ವಾ ! ನೆಕ್ಲೇಸ್ ಅಂದ್ರೆ ಇದು..!!

neckless

ಚೆನ್ನೈ: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನ್ನೇರುತ್ತಿದ್ದರೂ, ಜನ ಖರೀದಿ ಮಾಡುತ್ತಾರೆ. ಚಿನ್ನಾಭರಣಗಳನ್ನು ಖರೀದಿಸುವ ಸಂದರ್ಭದಲ್ಲಿ ವಿಶೇಷ ವಿನ್ಯಾಸದ ಆಭರಣಗಳು ಗಮನ ಸೆಳೆಯುತ್ತವೆ. ಇಂತಹ ವಿಶೇಷ ಚಿನ್ನಾಭರಣ ಕುರಿತಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ನೆಕ್ಲೇಸ್ ಗಳು 10 ರಿಂದ 50 ಗ್ರಾಂ ವರೆಗೆ ಇರುತ್ತವೆ. ಚೆನ್ನೈನ ಆಭರಣ ಮಳಿಗೆಯೊಂದರಲ್ಲಿ ಬರೋಬ್ಬರಿ 1 ಕೆ.ಜಿ. ತೂಕದ ಚಿನ್ನದ ನೆಕ್ಲೇಸ್ ಪ್ರದರ್ಶನಕ್ಕೆ ಇಡಲಾಗಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಸುಮಾರು 36 ಲಕ್ಷ ರೂಪಾಯಿ ಮೌಲ್ಯದ ಬೃಹತ್ ಗಾತ್ರದ ಈ ನೆಕ್ಲೇಸ್ ಅನ್ನು ವಿಶೇಷ ಡಿಸೈನ್ ನಲ್ಲಿ ಸಿದ್ಧಪಡಿಸಲಾಗಿದೆ. ಖ್ಯಾತ ಬಹುಭಾಷಾ ನಟಿ ತ್ರಿಷಾ ಈ ನೆಕ್ಲೇಸ್ ಅನಾವರಣ ಮಾಡಿದ್ದಾರೆ.

ಚೆನ್ನೈನ ಟಿ. ನಗರದಲ್ಲಿರುವ ಪ್ರಖ್ಯಾತ ಆಭರಣ ಮಳಿಗೆಯೊಂದರಲ್ಲಿ ನಡೆಯುತ್ತಿರುವ ನೆಕ್ಲೇಸ್ ಫೆಸ್ಟಿವೆಲ್ ನಲ್ಲಿ ಈ ಬೃಹತ್ ಗಾತ್ರದ ನೆಕ್ಲೇಸ್ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನು ಧರಿಸಿದರೆ, ಎದೆ ಭಾಗದವರೆಗೂ ಆವರಿಸುವುದರಿಂದ ಕುತ್ತಿಗೆಗೆ ಭಾರ ಎನಿಸುವುದಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...