alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ

ಇಂದು ಬಹುತೇಕ ಎಲ್ಲರ ಕೈಲೂ ಸ್ಮಾರ್ಟ್ ಫೋನ್ ಗಳಿವೆ. ಜೊತೆಗೆ ಬಹಳಷ್ಟು ಮಂದಿ ಕಂಪ್ಯೂಟರ್ ಬಳಸುತ್ತಿದ್ದಾರೆ. ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಪ್ರವೇಶವಾಗುತ್ತಿದ್ದಂತೆಯೇ ಇತರೆ ಕಂಪನಿಗಳೂ ಇದಕ್ಕೆ ಸ್ಪರ್ಧೆ ನೀಡಲು ದರ ಸಮರ ನಡೆಸಿವೆ. ಹೀಗಾಗಿ ಇಂಟರ್ನೆಟ್ ಬಳಕೆಯೂ ವ್ಯಾಪಕವಾಗಿದೆ.

ಆದರೆ ಟೆಲಿಕಾಂ ಕಂಪನಿಗಳು ತಾವು ಹೇಳಿಕೊಳ್ಳುವ ವೇಗದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ನೀಡುತ್ತಿಲ್ಲವೆಂಬ ದೂರುಗಳು ಸಾಮಾನ್ಯವಾಗಿದ್ದು, ಇದಕ್ಕೆ ಪೂರಕವೆಂಬಂತೆ ಭಾರತದ ಇಂಟರ್ನೆಟ್ ವೇಗ ಕಡಿಮೆಯೆಂಬ ಮಾಹಿತಿ ಇತ್ತೀಚೆಗೆ ಬಿಡುಗಡೆಗೊಂಡಿದೆ.

ಆದರೆ ದೇಶದ ಒಟ್ಟಾರೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ವೇಗ ಕಡಿಮೆಯಿದ್ದರೂ ಕರ್ನಾಟಕ ಅತಿ ಹೆಚ್ಚು ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. ತಮಿಳುನಾಡು ಎರಡನೇ ಸ್ಥಾನದಲ್ಲಿದ್ದರೆ ಮಿಜೋರಾಂ ಕೊನೆ ಸ್ಥಾನದಲ್ಲಿದೆ.

ಮೆಟ್ರೋ ನಗರಗಳ ಇಂಟರ್ನೆಟ್ ವೇಗದ ಸೌಲಭ್ಯದಲ್ಲಿ ರಾಜಧಾನಿ ಬೆಂಗಳೂರು 31.09 ಎಂಬಿಪಿಎಸ್ ವೇಗದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು,  ಚೆನ್ನೈ 32.67 ಎಂಬಿಪಿಎಸ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಡೌನ್ಲೋಡ್ ವೇಗದೊಂದಿಗೆ ಮೊದಲ ಸ್ಥಾನದಲ್ಲಿದೆ. 28.93 ಎಂಬಿಪಿಎಸ್ ವೇಗದೊಂದಿಗೆ ಹೈದರಾಬಾದ್ ತೃತೀಯ, 26.59 ವೇಗದೊಂದಿಗೆ ವಿಶಾಖಪಟ್ಟಣಂ ನಾಲ್ಕನೇ, 23.57 ಎಂಬಿಪಿಎಸ್ ವೇಗದೊಂದಿಗೆ ದೆಹಲಿ ಐದನೇ ಸ್ಥಾನದಲ್ಲಿದೆ. ವಾಣಿಜ್ಯ ನಗರಿ ಮುಂಬೈ 17.1 ಎಂಬಿಪಿಎಸ್ ವೇಗದೊಂದಿಗೆ ಮೆಟ್ರೋ ನಗರಗಳ ಪೈಕಿ ಕೊನೆ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...