alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: 11 ದಿನಗಳ ನಂತ್ರ ಇಳಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ವಾಹನ ಸವಾರರಿಗೆ ಖುಷಿ ಸುದ್ದಿ. ಸತತ 11 ದಿನಗಳ ಕಾಲ ನಿರಂತರವಾಗಿ ಏರುತ್ತಿದ್ದ ಪೆಟ್ರೋಲ್-ಡಿಸೇಲ್ ಬೆಲೆಗೆ ಬ್ರೇಕ್ ಬಿದ್ದಿದೆ. ಸೋಮವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 11 ಪೈಸೆ ಹಾಗೂ ಡಿಸೇಲ್ ಬೆಲೆ 14 ಪೈಸೆ ಇಳಿಕೆಯಾಗಿದೆ.

ಕಳೆದ 11 ದಿನಗಳಲ್ಲಿ ಪೆಟ್ರೋಲ್ –ಡಿಸೇಲ್ ಬೆಲೆಯಲ್ಲಿ ಸುಮಾರು 1 ರೂಪಾಯಿ ಏರಿಕೆಯಾಗಿತ್ತು. ಇಂದು 11 ಪೈಸೆ ಇಳಿಕೆಯಾಗಿದ್ದು ಲೀಟರ್ ಪೆಟ್ರೋಲ್ ಬೆಲೆ 76.84 ರೂಪಾಯಿಯಾಗಿದೆ. ಪ್ರತಿ ಲೀಟರ್ ಡಿಸೇಲ್ ಬೆಲೆ 68.47 ರೂಪಾಯಿಯಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಡಾಲರ್ ವಿರುದ್ಧ ರೂಪಾಯಿ ಬೆಲೆಯಲ್ಲಿ ಏರಿಕೆ ಕಂಡಿರುವ ಕಾರಣ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 75 ಡಾಲರ್ ಆಗಿದೆ. ಇದು ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...