alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಸಿಗುತ್ತೆ ಔಷಧಿಯ ಮೂಲ ಬೆಲೆ

drugs

ಭಾರತೀಯರಿಗೊಂದು ಖುಷಿ ಸುದ್ದಿ. ಇನ್ಮುಂದೆ ಔಷಧಿ ಅಂಗಡಿಗಳ ಮೋಸಕ್ಕೆ ನೀವು ಬಲಿಪಶುಗಳಾಗಬೇಕಾಗಿಲ್ಲ. ಹೆಚ್ಚಿನ ಬೆಲೆಗೆ ಔಷಧಿಗಳು ಮಾರಾಟವಾಗುವುದಿಲ್ಲ. ಯಾಕೆಂದ್ರೆ ಕೇಂದ್ರ ಸರ್ಕಾರ ಔಷಧಿಗಳ ಮೂಲ ಬೆಲೆಯನ್ನು ತಿಳಿಸುವ ಆ್ಯಪ್ ಬಿಡುಗಡೆ ಮಾಡಿದೆ.

ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್, ಔಷಧಿ ಬೆಲೆ ನಿಯಂತ್ರಕಗಳ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದಾರೆ. ಔಷಧಿ ಕೊಳ್ಳುವ ಮುನ್ನ ಆ ಔಷಧಿಯ ಬೆಲೆಯನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ. ಒಂದು ವೇಳೆ ನಿಗದಿಗಿಂತ ಹೆಚ್ಚು ಹಣವನ್ನು ಔಷಧಿ ಅಂಗಡಿಯವನು ವಸೂಲಿ ಮಾಡುತ್ತಿದ್ದಲ್ಲಿ ಈ ಆ್ಯಪ್ ಸಹಾಯದಿಂದಲೂ ನೀವು ದೂರು ದಾಖಲಿಸಬಹುದಾಗಿದೆ.

ಆಂಡ್ರಾಯ್ಡ್ ಫೋನ್ ಪ್ಲೇ ಸ್ಟೋರ್ ಮೂಲಕ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಔಷಧಿ ಬೆಲೆ ತಿಳಿಯುವುದಕ್ಕಿಂತ ಮೊದಲು ಯಾವ ರಾಜ್ಯದವರೆಂದು ನಮೂದಿಸಬೇಕಾಗುತ್ತದೆ. ನಂತ್ರ ಬೆಲೆ ಜೊತೆಯಲ್ಲಿ ಇತರ ಮಾಹಿತಿಗಳನ್ನು ಪಡೆಯಬಹುದಾಗಿದೆ. ಔಷಧಿ ಮಾರಾಟದಲ್ಲಿ ನಡೆಯುತ್ತಿರುವ ಅಕ್ರಮ ತಪ್ಪಿಸುವುದು ಇದರ ಉದ್ದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...