alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಬಲ್ ಆಪರೇಟರ್ಸ್ ಗಳಿಗೆ ಟಕ್ಕರ್ ನೀಡಲಿದೆ ಗಿಗಾ ಫೈಬರ್

ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಸೇವೆ ಆಗಸ್ಟ್ 15 ರಿಂದ ಶುರುವಾಗಲಿದೆ. ಜಿಯೋ ಡಿಟಿಹೆಚ್ ಹಾಗೂ ಬ್ರಾಡ್ ಬ್ಯಾಂಡ್ ಸೇವೆ 500 ರೂಪಾಯಿಗೆ ಶುರುವಾಗಲಿದೆ. ಕೇಬರ್ ಆಪರೇಟರ್ಸ್ ಗೆ ನೀವು ನೀಡುವ ಚಾರ್ಜ್ ನ ಅರ್ಧ ಹಣವನ್ನು ಜಿಯೋ ಗಿಗಾ ಫೈಬರ್ ಸೇವೆಗೆ ಪಡೆಯಲಿದೆ.

ಗಿಗಾ ಫೈಬರ್ ಕಮರ್ಶಿಯಲ್ ಸೇವೆಯನ್ನು ದೀಪಾವಳಿಯೊಳಗೆ ಶುರು ಮಾಡುವ ಪ್ಲಾನ್ ಹೊಂದಿದೆ. ಆರಂಭದಲ್ಲಿ ಈ ಸೇವೆ ಮೆಟ್ರೋ ನಗರಗಳಲ್ಲಿ ಶುರುವಾಗಲಿದೆ. ಸಾಮಾನ್ಯವಾಗಿ ಬ್ರಾಡ್ ಬ್ಯಾಂಡ್ ಸೇವೆ ನೀಡುವ ಕಂಪನಿಗಳು, 100 ಎಂಬಿಪಿಎಸ್ ವೇಗದ 100 ಜಿಬಿ ಡೇಟಾ ನೀಡಲು ತಿಂಗಳಿಗೆ 700 ರಿಂದ ಸಾವಿರದವರೆಗೆ ಚಾರ್ಜ್ ಮಾಡುತ್ತವೆ. ಇದ್ರ ಜೊತೆ ಟಿವಿ ಸೇವೆ ನೀಡಲು 250 ರಿಂದ 350 ರವರೆಗೆ ಹಣ ಪಡೆಯುತ್ತವೆ.

ಹಿಂದಿನ ಸೇವೆಗೆ ಹೋಲಿಸಿದ್ರೆ ಜಿಯೋ, ಕೇಬಲ್ ಆಪರೇಟರ್ ಗಿಂತ ಶೇಕಡಾ 50ರಷ್ಟು ಕಡಿಮೆ ಬೆಲೆಗೆ ಸೇವೆ ನೀಡಲಿದೆ. ಜಿಯೋ 41 ನೇ ವಾರ್ಷಿಕ ಸಭೆಯಲ್ಲಿ ಗಿಗಾ ಫೈಬರ್ ಸೇವೆ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಫೈಬರ್ ಸೇವೆ ನೋಂದಣಿ ಕಾರ್ಯ ಆಗಸ್ಟ್ 15 ರಿಂದ jio.com ಹಾಗೂ ಮೈ ಜಿಯೋ ಆ್ಯಪ್ ನಲ್ಲಿ ಲಭ್ಯವಾಗಲಿದೆ. ನೋಂದಣಿಯನ್ನು 1100 ನಗರದ ಗ್ರಾಹಕರು ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...