alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ಖರೀದಿದಾರರಿಗೆ ‘ಶಾಕಿಂಗ್’ ನ್ಯೂಸ್

ಭಾರತೀಯ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ, ಹೊಸ ಇ-ಕಾಮರ್ಸ್‌ ನೀತಿಯನ್ನು ಜಾರಿಗೊಳಿಸಲಿದ್ದು, ಈ ಸಂಬಂಧ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಪ್ರಮುಖವಾಗಿ ಆನ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟವನ್ನು ಮಾಡಲು ಅವಕಾಶ ಇರುವುದಿಲ್ಲ. ನೀತಿ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಸಾರ್ವಜನಿಕರ ಅಭಿಪ್ರಾಯಕ್ಕೂ ಬಿಡಲಾಗುತ್ತದೆ. ಇದರಿಂದ ಅಮೆಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ನಂತಹ ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ಉತ್ಪನ್ನಗಳ ರಿಯಾಯಿತಿ ಬೆಲೆ ಇಲ್ಲವಾಗಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತೀಯ ಇ-ಕಾಮರ್ಸ್‌ಗೆ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ಹರಿವು ಕಂಡು ಬರುತ್ತಿದ್ದು, ವಿಶ್ವಮಟ್ಟದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಅಲಿಬಾಬಾ, ಸಾಫ್ಟ್‌ಬ್ಯಾಂಕ್‌, ಟೈಗರ್‌ ಗ್ಲೋಬಲ್‌ ಹಾಗೂ ವಾಲ್‌ ಮಾರ್ಟ್‌ ಸಂಸ್ಥೆಗಳು ಹೂಡಿಕೆಗೆ ಸಿದ್ಧವಾಗಿವೆ. ಹೊಸ ನೀತಿಯ ರಚನೆಯಿಂದ ಆಯಾ ಸಂಸ್ಥೆಗಳು ತಮ್ಮದೇ ಆದ ಪೋರ್ಟಲ್‌ನ್ನು ರಚಿಸಿಕೊಳ್ಳಬಹುದು.

ಭಾರತೀಯ ಇ-ಕಾಮರ್ಸ್‌ ಮಾರುಕಟ್ಟೆ ಪ್ರಸ್ತುತ 25 ಬಿಲಿಯನ್‌ ಡಾಲರ್‌ ನಷ್ಟು ಮೌಲ್ಯಯುತವಾಗಿದ್ದು, ಮುಂದಿನ 10 ವರ್ಷದಲ್ಲಿ 200 ಬಿಲಿಯನ್‌ ಡಾಲರ್ ಮೌಲ್ಯ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ನೀತಿಯಿಂದ ಆನ್‌ ಲೈನ್ ವ್ಯವಹಾರಕ್ಕೆ ಹೊಡೆತ ಬೀಳುವುದು ಖಚಿತ ಎಂದು ಆನ್‌ಲೈನ್‌ ಮಾರುಕಟ್ಟೆಯ ವಲಯದಲ್ಲಿ ಆತಂಕ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...