alex Certify
ಕನ್ನಡ ದುನಿಯಾ       Mobile App
       

Kannada Duniya

1 ರೂ. ಸೀರೆ ಖರೀದಿಸಲು ಮುಗಿಬಿದ್ದ ಮಹಿಳೆಯರು

saree_6‘ಕ್ಲಿಯರೆನ್ಸ್ ಸೇಲ್’ ಹೆಸರಿನಲ್ಲಿ ಅಂಗಡಿ ಮಾಲೀಕರೊಬ್ಬರು 1 ರೂಪಾಯಿಗೆ ಒಂದು ಸೀರೆ ಎಂಬ ಘೋಷಣೆ ಮಾಡಿದ್ದು, ಇದರಿಂದ ಆಕರ್ಷಿತರಾದ ಮಹಿಳೆಯರು ಕೊಳ್ಳಲು ಮುಗಿಬಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾದ ಘಟನೆ ವಾರಾಣಾಸಿಯಲ್ಲಿ ನಡೆದಿದೆ.

ವಾರಾಣಾಸಿಯ ಮೆಹಮೂರ್ಗಂಜ್ ಏರಿಯಾದಲ್ಲಿನ ಅಂಗಡಿಯೊಂದರ ಮಾಲೀಕರು ಹಳೆ ಸ್ಟಾಕ್ ಕ್ಲಿಯರ್ ಮಾಡುವ ಸಲುವಾಗಿ 1 ರೂಪಾಯಿಗೆ ಒಂದು ಸೀರೆ ಎಂಬ ಘೋಷಣೆ ಮಾಡಿದ್ದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಕ್ಷಣಾರ್ಧದಲ್ಲೇ ನೂರಾರು ಮಹಿಳೆಯರು ಅಂಗಡಿ ಎದುರು ಜಮಾಯಿಸಿದ್ದರು.

ಇದರಿಂದಾಗಿ ಬ್ಯುಸಿ ಏರಿಯಾ ಆಗಿರುವ ಮೆಹಮೂರ್ಗಂಜ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ನೆರೆದಿದ್ದ ಮಹಿಳೆಯರನ್ನು ಚದುರಿಸಿದ್ದಾರೆ. ನೆರೆದಿದ್ದ ಮಹಿಳೆಯರನ್ನು ಕಂಡು ಕಂಗಾಲಾದ ಅಂಗಡಿ ಮಾಲೀಕ ಕೂಡಾ ಆಫರ್ ಹಿಂಪಡೆದಿದ್ದಾನೆ. ವಾಸ್ತವವಾಗಿ 1 ರೂ. ಗೆ ಸೀರೆ ಖರೀದಿಸುವ ಮುನ್ನ 500 ರೂ. ಬೆಲೆ ಬಾಳುವ ವಸ್ತು ಖರೀದಿಸುವ ನಿಬಂಧನೆಯನ್ನು ಅಂಗಡಿ ಮಾಲೀಕ ಇಟ್ಟಿದ್ದು, ಆದರೆ ಇದರ ಅರಿವಿಲ್ಲದೆ 1 ರೂ.ಗೆ ಸೀರೆ ಸಿಗುತ್ತದೆಂಬ ಕಾರಣಕ್ಕೆ ಮಹಿಳೆಯರು ನೆರೆದಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...