alex Certify
ಕನ್ನಡ ದುನಿಯಾ       Mobile App
       

Kannada Duniya

8,698 ಕೋಟಿ ರೂ. GST ಪರಿಹಾರ ನೀಡಿದ ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿ ಮಾಡಿದ ಬಳಿಕ, ರಾಜ್ಯಗಳಿಗೆ ಆದ ಆದಾಯ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 8,698 ಕೋಟಿ ರೂ. ಬಿಡುಗಡೆ ಮಾಡಿದೆ.

ರಾಜಸ್ತಾನ ಮತ್ತು ಅರುಣಾಚಲ ಪ್ರದೇಶ ಹೊರತುಪಡಿಸಿ, ಎಲ್ಲಾ ರಾಜ್ಯಗಳಿಗೆ ಸರಕು ಮತ್ತು ಸೇವೆಗಳ ತೆರಿಗೆ ಪರಿಹಾರವನ್ನು ನೀಡಲಾಗಿದೆ. ಮೊದಲ 2 ತಿಂಗಳ(ಜುಲೈ–ಆಗಸ್ಟ್) ಪರಿಹಾರವನ್ನು ನೀಡಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.

ಜುಲೈ ಮತ್ತು ಆಗಸ್ಟ್ ನಲ್ಲಿ 15,060 ಕೋಟಿ ರೂ. ಸಂಗ್ರಹವಾಗಿದ್ದು, ರಾಜ್ಯಗಳಿಗೆ 8,698 ಕೋಟಿ ರೂ. ನೀಡಲಾಗಿದೆ. ಜಿ.ಎಸ್.ಟಿ. ಅಡಿಯಲ್ಲಿ ಐಷಾರಾಮಿ ಕಾರ್ ಮೊದಲಾದವುಗಳ ಮೇಲೆ ಶೇ. 28 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಜಿ.ಎಸ್.ಟಿ. ಅನುಷ್ಠಾನದಿಂದಾಗಿ ರಾಜ್ಯಗಳ ಆದಾಯ ನಷ್ಟವನ್ನು ಸರಿದೂಗಿಸಲು ಕ್ರಮಕೈಗೊಳ್ಳಲಾಗಿದೆ. ಜಿ.ಎಸ್.ಟಿ. ಸೇವಾ ತೆರಿಗೆಯು ಅಬಕಾರಿ ಸುಂಕ, ವ್ಯಾಟ್ ಸೇರಿದಂತೆ 12 ತೆರಿಗೆಗಳನ್ನು ಒಟ್ಟುಗೂಡಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...