alex Certify
ಕನ್ನಡ ದುನಿಯಾ       Mobile App
       

Kannada Duniya

5 ರಿಂದ 2 ಕ್ಕೆ ಇಳಿಯಲಿವೆ ಜಿಎಸ್‌ಟಿ ಸ್ಲಾಬ್‌ಗಳು

ಜಿಎಸ್‌ಟಿ ಸ್ಲಾಬ್‌ಗಳು ಸದ್ಯ ಐದರಷ್ಟಿದ್ದು, ಅದನ್ನು ಶೀಘ್ರದಲ್ಲೇ ಎರಡಕ್ಕೆ ಇಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಬೆಂಗಳೂರು ವಲಯದ ಕೇಂದ್ರೀಯ ತೆರಿಗೆಗಳ ಪ್ರಧಾನ ಮುಖ್ಯ ಆಯುಕ್ತರು ಹೇಳಿದ್ದಾರೆ.

ಶೇ.90 ರಷ್ಟು ತೆರಿಗೆಗಳು ಶೇ.18 ರ ಸ್ಲಾಬ್‌ನ ಅಡಿಯಲ್ಲಿ ಬರುತ್ತಿರುವುದರಿಂದ ಈ ಕುರಿತು ಆಲೋಚಿಸಲಾಗಿದೆ ಎಂದು ಅವರು ಬೆಂಗಳೂರಿನಲ್ಲಿ ‘ಜಿಎಸ್‌ಟಿ: ಪ್ರಾಯೋಗಿಕ ಅಗತ್ಯತೆಗಳು ಹಾಗೂ ಸವಾಲುಗಳು’ ಕುರಿತ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ಜಿಎಸ್‌ಟಿ ಚಾಲ್ತಿಗೆ ಬಂದಂದಿನಿಂದ ಸರ್ಕಾರ, ಈ ಪರೋಕ್ಷ ತೆರಿಗೆಯ ಕುರಿತು ತೆರಿಗೆ ಪಾವತಿದಾರರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕಾರ್ಯ ಮಾಡುತ್ತಿದೆ. ಜಿಎಸ್‌ಟಿ ಎಂಬುದು ವಿನಾಶಕಾರಿ ಕಾನೂನು ಅಲ್ಲ, ಬದಲಾಗಿ ಇದೊಂದು ರೂಪಾಂತರದ ಕಾನೂನು. ಈ ಕಾನೂನು ಬಲಿಯುತ್ತಾ ಹೋದಂತೆ, ಆರಂಭದಲ್ಲಿ ಸಂಶಯಗಳನ್ನು ಹೊಂದಿದ್ದ ಉದ್ಯಮವೂ ಕಾನೂನಿನೊಂದಿಗೆ ಕೈಜೋಡಿಸುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ ದಾಖಲೆಯ ಪ್ರಕಾರ, 8 ಲಕ್ಷ ಮಂದಿ ತೆರಿಗೆದಾರರಿದ್ದಾರೆ. ಇಲಾಖೆಯು ಪ್ರತಿ ತಿಂಗಳು ಸರಾಸರಿ 6,500 ಕೋಟಿ ರೂ. ತೆರಿಗೆ ಸಂಗ್ರಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...