alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಪಾವತಿಸಲು ವಿಳಂಬ ಮಾಡಿದ್ರೆ ವಿಮಾ ಕಂಪನಿಗಳಿಗೆ ಬೀಳುತ್ತೆ ದಂಡ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಆಯುಷ್ಮಾನ್ ಭಾರತ್’ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂಬ ಉದ್ದೇಶದಿಂದ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಯೋಜನೆ ಅಡಿಯಲ್ಲಿ ಆಸ್ಪತ್ರೆಗಳಿಗೆ ಹಣ ಬಿಡುಗಡೆ ಮಾಡಲು ವಿಮಾ ಕಂಪನಿಗಳು ವಿಳಂಬ ಮಾಡಿದರೆ ದಂಡ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಚಿಕಿತ್ಸೆಗಳ ಪಟ್ಟಿ ಹಾಗು ಅದಕ್ಕೆ ತಗಲುವ ವೆಚ್ಚದ ಕುರಿತ ಮಾರ್ಗಸೂಚಿಯೊಂದನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಆಸ್ಪತ್ರೆಗಳ ಹಣ ಬಿಡುಗಡೆ ಕ್ಲೇಮ್ ಇತ್ಯರ್ಥಗೊಳಿಸಲು ವಿಮಾ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಒಂದು ವೇಳೆ ಈ ಅವಧಿಯೊಳಗೆ ಹಣ ಪಾವತಿಸದಿದ್ದರೆ ಅಂತಹ ವಿಮಾ ಕಂಪನಿಗಳಿಗೆ ಪ್ರತಿ ವಾರದ ಲೆಕ್ಕದಲ್ಲಿ ಪಾವತಿಸಬೇಕಾದ ಹಣದ ಮೇಲೆ ಶೇಕಡ ಒಂದರಷ್ಟು ಬಡ್ಡಿ ವಿಧಿಸಲು ತೀರ್ಮಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...