alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಉಡುಗೊರೆಯೊಂದನ್ನು ನೀಡಿದೆ. ಇನ್ಮುಂದೆ ಕೇಂದ್ರ ಸರ್ಕಾರಿ ನೌಕರರು ಹೊಸ ಮನೆ ನಿರ್ಮಾಣ ಅಥವಾ ಖರೀದಿಗೆ ಶೇಕಡಾ 8.50 ಸರಳ ಬಡ್ಡಿ ದರದಲ್ಲಿ 25 ಲಕ್ಷದವರೆಗೆ ಮುಂಗಡ ಪಡೆಯಬಹುದಾಗಿದೆ.

ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಹಿಂದೆ 7.50 ಲಕ್ಷ ರೂಪಾಯಿಯನ್ನು ನೌಕರರು ಮುಂಗಡ ರೂಪದಲ್ಲಿ ಪಡೆಯಬಹುದಿತ್ತು. ಬಡ್ಡಿ ದರ ಶೇಕಡಾ 6 ರಿಂದ 9.50 ರೊಳಗಿತ್ತು. ಆದ್ರೀಗ ಶೇಕಡಾ 8.50 ರ ಬಡ್ಡಿ ದರದಲ್ಲಿ 25 ಲಕ್ಷ ರೂಪಾಯಿ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಎಸ್ ಬಿ ಐ ನಲ್ಲಿ 25 ಲಕ್ಷ ರೂಪಾಯಿ ಸಾಲವನ್ನು 20 ವರ್ಷಕ್ಕೆ ಪಡೆದಲ್ಲಿ ನೌಕರ ಶೇಕಡಾ 8.50 ರಷ್ಟು ಬಡ್ಡಿ ತುಂಬಬೇಕಾಗುತ್ತದೆ. ಅಂದ್ರೆ ಪ್ರತಿ ತಿಂಗಳು ನೌಕರ 21,459 ರೂಪಾಯಿಯನ್ನು ಬ್ಯಾಂಕ್ ಗೆ ಕಟ್ಟಬೇಕಾಗುತ್ತದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ದಂಪತಿ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಇಬ್ಬರೂ ಸೇರಿ ಅಥವಾ ಬೇರೆ ಬೇರೆಯಾಗಿ ಇದ್ರ ಲಾಭ ಪಡೆಯಬಹುದಾಗಿದೆ. ಈ ಹಿಂದೆ ಇಬ್ಬರಲ್ಲಿ ಒಬ್ಬರು ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶವಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...