alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತು: ಸೆಲೆಬ್ರಿಟಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಜಾಹೀರಾತುಗಳ ಮೂಲಕ ಜನರನ್ನು ತಪ್ಪು ದಾರಿಗೆಳೆಯುವ ಸೆಲೆಬ್ರಿಟಿಗಳಿಗೆ 3 ವರ್ಷ ನಿಷೇಧ ಮತ್ತು 50 ಲಕ್ಷ ರೂ. ದಂಡ ವಿಧಿಸುವ ಹೊಸ ಬಿಲ್ ಮಂಡಿಸಲಾಗಿದೆ.

ಗ್ರಾಹಕರನ್ನು ಜಾಹೀರಾತುಗಳಲ್ಲಿ ತಪ್ಪು ದಾರಿಗೆಳೆಯುವ ಸೆಬ್ರಿಟಿಗಳಿಗೆ ಜೈಲು ಶಿಕ್ಷೆ ವಿಧಿಸುವ ಬದಲಾಗಿ ನಿಷೇಧ ಹೇರುವ ಮತ್ತು ದಂಡ ವಿಧಿಸುವ ಹೊಸ ಗ್ರಾಹಕ ರಕ್ಷಣಾ ಮಸೂದೆಯನ್ನು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಂಡಿಸಿದ್ದಾರೆ.

31 ವರ್ಷ ಹಳೆಯದಾದ ಕಾನೂನನ್ನು ಬದಲಿಸಲಾಗಿದೆ. ಮಸೂದೆಯಡಿಯಲ್ಲಿ ಪ್ರಸ್ತಾಪವಾಗಿರುವಂತೆ, ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ ಸ್ಥಾಪಿಸಲಿದ್ದು, ಇದು ಸುಳ್ಳು ಜಾಹೀರಾತು, ತಪ್ಪು ದಾರಿಗೆಳೆಯುವ ಜಾಹೀರಾತುಗಳ ಬಗ್ಗೆ ಪರಾಮರ್ಶೆ ನಡೆಸಲಿದೆ. ಜಾಹೀರಾತುದಾರರು, ವ್ಯಾಪಾರಿಗಳು, ತಯಾರಕರು, ಸೆಲೆಬ್ರಿಟಿಗಳು ಕೂಡ ಇದರಲ್ಲಿ ಒಳಗೊಳ್ಳಲಿದ್ದಾರೆ.

ಕನ್ಸ್ಯೂಮರ್ ಪ್ರೊಟೆಕ್ಷನ್ ಬಿಲ್ 2015 ರ ಪ್ರಕಾರ ತಪ್ಪು ಜಾಹೀರಾತು ನೀಡಿದವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಸೂಚಿಸಲಾಗಿತ್ತು. ಆದಾಗ್ಯೂ ಸರ್ಕಾರ ಜೈಲು ಶಿಕ್ಷೆಯ ಬದಲಿಗೆ 3 ವರ್ಷ ನಿಷೇಧ ಹೇರಲು ಪ್ರಸ್ತಾಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...