alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿ ಖುಷಿ ಹೆಚ್ಚಿಸಲು ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ

ರಂಗೀನಾಟ ಹೋಳಿ ಹತ್ತಿರ ಬರ್ತಿದೆ. ಮಾರುಕಟ್ಟೆಯಲ್ಲಿ ಬಣ್ಣಗಳ ರಾಶಿ ಕಾಣಸಿಗ್ತಿದೆ. ಆದ್ರೆ ಬಣ್ಣಕ್ಕೆ ಮಣ್ಣು ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿಯೇ ಕೆಲವರು ಮನೆಯಲ್ಲಿಯೇ ಬಣ್ಣ ತಯಾರಿಸುವ ಕೆಲಸಕ್ಕೆ ಇಳಿದಿದ್ದಾರೆ. ಆದ್ರೆ ನೈಸರ್ಗಿಕ ಬಣ್ಣವನ್ನು ನೀವು ಮನೆಯಲ್ಲಿ ತಯಾರಿಸಬೇಕಾಗಿಲ್ಲ. ಮನೆಯಲ್ಲಿ ಕುಳಿತು ನೈಸರ್ಗಿಕ ಬಣ್ಣವನ್ನು ತರಿಸಿಕೊಳ್ಳಬಹುದು.

ಯಸ್, ನೈಸರ್ಗಿಕ ಬಣ್ಣಗಳು ಈಗ ಇ-ವೆಬ್ಸೈಟ್ ಗಳಲ್ಲಿ ಸಿಗ್ತಿವೆ. ಮನೆಯಲ್ಲಿಯೇ ಕುಳಿತು Salebhai.comಗೆ ಹೋಗಿ ನೈಸರ್ಗಿಕ ಬಣ್ಣಗಳನ್ನು ಆರ್ಡರ್ ಮಾಡಿ ಖುಷಿಖುಷಿಯಾಗಿ ಹಬ್ಬ ಆಚರಿಸಬಹುದು. ಈ ವೆಬ್ ಸೈಟ್ ನಲ್ಲಿ ನೈಸರ್ಗಿಕ ಬಣ್ಣವೊಂದೇ ಅಲ್ಲ ಡ್ರೈ ಫ್ರೂಟ್ಸ್ ಸೇರಿದಂತೆ ಸಿಹಿ ತಿಂಡಿಗಳು ಕೂಡ ಸಿಗುತ್ವೆ.

ಈ ಬಾರಿ ಶುಕ್ರವಾರ ಹೋಳಿ ಬಂದಿದೆ. ಸತತ ಮೂರು ದಿನ ರಜೆ ಸಿಗ್ತಿದೆ. ಎಲ್ಲಿಗಾದ್ರೂ ಹೊರಗೆ ಹೋಗಿ ಹೋಳಿ ಆಚರಿಸೋಣ ಎನ್ನುವವರು ಇದಕ್ಕೂ ಪ್ಲಾನ್ ಮಾಡಬಹುದು. ನಿಮ್ಮ ಬಳಿ ಕಾರ್ ಇಲ್ಲ, ಬಸ್, ಟ್ರೈನ್ ಬುಕ್ಕಿಂಗ್ ಮುಗಿದಿದೆ ಎಂದು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಕಾರ್ ಚಲಾಯಿಸಲು ಬಂದ್ರೆ Mylescars.com ನಿಮಗೆ ಕಾರನ್ನು ಬಾಡಿಗೆಗೆ ನೀಡುತ್ತದೆ. ಎಷ್ಟು ದಿನ ಬೇಕು? ಯಾವ ಕಾರು ಬೇಕು? ಎಂಬುದನ್ನು ಆಯ್ಕೆ ಮಾಡಿಕೊಂಡು ನೀವು ಆರಾಮವಾಗಿ ಸುತ್ತಾಡಬಹುದು.

ದುಬಾರಿ ಕಾರು ಓಡಿಸುವ ಶೋಕಿ ಇರುವವರು Eco Rent a Car ಟ್ರೈ ಮಾಡಿ. ಇಲ್ಲಿ ದುಬಾರಿ ಬೆಲೆ ಕಾರುಗಳು ಬಾಡಿಗೆಗೆ ಸಿಗುತ್ವೆ. ಮರ್ಸಿಡಿಸ್, ಆಡಿಯಂತಹ ಐಷಾರಾಮಿ ಕಾರುಗಳಲ್ಲಿ ಹೋಗುವ ಅವಕಾಶವನ್ನು ಈ ವೆಬ್ಸೈಟ್ ನಿಮಗೆ ನೀಡ್ತಿದೆ.

ಕುಟುಂಬಸ್ಥರ ಜೊತೆ ಹೊಟೇಲ್ ಗೆ ಹೋಗಿ ಹೋಳಿ ಊಟ ತಿನ್ನಲು ಬಯಸುವವರಿಗೂ ಮೊಬೈಲ್ ಮಾಹಿತಿ ನೀಡುತ್ತದೆ. Nearbuy, Zomato ಸೇರಿದಂತೆ ಬೇರೆ ಬೇರೆ ವೆಬ್ಸೈಟ್ ಗಳು ನಿಮಗೆ ನಿಮ್ಮ ಮನೆ ಹತ್ತಿರದಲ್ಲಿ ಯಾವ ಹೊಟೇಲ್ ಚೆನ್ನಾಗಿದೆ. ಅಲ್ಲಿ ಏನೇನು ಸಿಗುತ್ತೆ ಎಂಬೆಲ್ಲ ಮಾಹಿತಿ ನೀಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...