alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ ! ಕಾವೇರಿ ಕಿಚ್ಚಿಗೆ ನಷ್ಟವಾಗಿದ್ದೆಷ್ಟು ಗೊತ್ತಾ..?

asocham

ನವದೆಹಲಿ: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಂಟಾದ ಹಿಂಸಾಚಾರದಿಂದ ಅಪಾರ ಸಂಖ್ಯೆಯ ವಾಹನಗಳು, ಆಸ್ತಿ, ಪಾಸ್ತಿಗೆ ಹಾನಿಯಾಗಿದೆ. ಜೀವಹಾನಿಯೂ ಆಗಿದೆ.

ಕಾವೇರಿ ಕಿಚ್ಚಿನಿಂದ ಸುಮಾರು 25 ಸಾವಿರ ಕೋಟಿ ರೂ.ನಷ್ಟವಾಗಿದೆ. ಕಾವೇರಿ ವಿಚಾರವಾಗಿ ಸುಮಾರು 9 ದಿನಗಳಿಂದ ಕರ್ನಾಟಕದಲ್ಲಿ ಹೋರಾಟ ನಡೆದಿದೆ. ಕರ್ನಾಟಕ ಬಂದ್ ನಡೆಸಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಿಂಸಾಚಾರ ನಡೆದು, ಜೊತೆಗೆ ಅನೇಕ ಜಿಲ್ಲೆಗಳಲ್ಲಿಯೂ ಉದ್ವಿಗ್ನ ಸ್ಥಿತಿ ಉಂಟಾಗಿ 500 ಕ್ಕೂ ಅಧಿಕ ಕಂಪನಿಗಳು ಮುಚ್ಚಿವೆ. ಸರಕು ಸಾಗಾಣಿಕೆ, ಉತ್ಪಾದನೆ, ಐ.ಟಿ., ಪ್ರವಾಸ, ಸಿನಿಮಾ, ವ್ಯಾಪಾರ, ವಹಿವಾಟು ಮೊದಲಾದವು ಬಂದ್ ಆಗಿದ್ದು, ಹೆಚ್ಚಿನ ನಷ್ಟವಾಗಲು ಕಾರಣ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ(ಅಸೋಚಾಮ್) ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದ್ದಾರೆ.

ಇದರೊಂದಿಗೆ ಅಪಾರ ಸಂಖ್ಯೆಯ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದಲೂ ಹೆಚ್ಚಿನ ಹಾನಿ ಸಂಭವಿಸಿದೆ. ಎರಡೂ ರಾಜ್ಯಗಳ ಜನ ಹಿಂಸಾಚಾರಕ್ಕೆ ಮುಂದಾಗದೇ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...