alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾದ್ರೂ ಇದು ನಿಜ: ಈ ಗ್ರಾಮದಲ್ಲಿಲ್ಲ ನಗದು ವ್ಯವಹಾರ

ಭಾರತದಲ್ಲಿ ಈಗ ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದೆ. ಭೀಮ್, ಪೇಟಿಎಂ ಸೇರಿದಂತೆ ಹಲವು ಆಪ್ ಗಳು ಆಫರ್ ಗಳ ಜೊತೆ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಕಳೆದ ಹಲವು ವರ್ಷಗಳಿಂದ ನೋಟಿನ ಮುಖವನ್ನು ನೋಡದ ಗ್ರಾಮವೊಂದು ಭಾರತದಲ್ಲಿದೆ. ಅಲ್ಲಿ ನಗದುರಹಿತ ವ್ಯವಹಾರ ಶುರುವಾಗಿ ಬಹಳ ವರ್ಷಗಳು ಕಳೆದಿವೆ. ಟೀ, ಸಿಗರೇಟು ಖರೀದಿಯಿಂದ ಹಿಡಿದು ಎಲ್ಲ ವ್ಯವಹಾರಗಳೂ ಮೊಬೈಲ್ ನಿಂದ ನಡೆಯುತ್ತದೆ.

ಗುಜರಾತಿನ ಸಬರ್ಕಾಂತ ಜಿಲ್ಲೆಯ ಅಕೋದರ ಎಂಬ ಹಳ್ಳಿ ಜನರು ನಗದು ವ್ಯವಹಾರದ ಉಸಾಬರಿಯಿಲ್ಲದೆ ತಣ್ಣಗೆ ಜೀವನ ನಡೆಸುತ್ತಿದ್ದಾರೆ. ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ತೊಂದರೆ ಇಲ್ಲ, ಎಟಿಎಂನಲ್ಲಿ ಹಣ ಬರ್ತಾ ಇಲ್ಲ, ಚಿಲ್ಲರೆ ಸಿಗ್ತಾ ಇಲ್ಲ ಎಂಬ ಚಿಂತೆ ಅವರನ್ನು ಕಾಡಿಲ್ಲ.

ಅಶಿಕ್ಷಿತ ಮಂದಿ ಕೂಡ ಅಕೋದರದಲ್ಲಿ ನಗದಿಲ್ಲದೆ ವ್ಯವಹಾರ ನಡೆಸುವುದನ್ನು ಕಲಿತಿದ್ದಾರೆ. 1985-86 ರಲ್ಲಿ ಇಲ್ಲಿ ಹಣಕಾಸು ಸೇವಾ ಕೇಂದ್ರ ಆರಂಭಿಸಲಾಗಿದೆ. ಆರ್.ಬಿ.ಐ. ಅನುಮತಿ ಪಡೆದು ಬ್ಯಾಂಕ್ ರೀತಿಯಲ್ಲಿ ಈ ಕೇಂದ್ರ ಕೆಲಸ ಮಾಡ್ತಾ ಇದೆ. ಎಎಫ್ಎಸ್, ಗ್ರಾಮದ ಜನರಿಗೆ ಒಂದು ಖಾತೆಯ ಸಂಖ್ಯೆ ನೀಡಲಿದೆ. ಸಣ್ಣ ಹಾಗೂ ದೊಡ್ಡ ಖರೀದಿ ವೇಳೆ ಗ್ರಾಹಕರು ಈ ಖಾತೆ ನಂಬರ್ ನೀಡಿದ್ರೆ ಸಾಕು.

ಗ್ರಾಮಕ್ಕೆ ಬರುವ ಹೊಸಬರು ಹಾಗೂ ಸಂಬಂಧಿಕರಿಗಾಗಿ ಪ್ರತ್ಯೇಕ ಕಾರ್ಡ್ ನೀಡಲಾಗುತ್ತದೆ. ಗ್ರಾಮದಿಂದ ಹೊರಗೆ ವ್ಯವಹಾರ ನಡೆಸುವಾಗ ಹಾಗೂ ಪ್ರವಾಸಿಗರಿಗೆ ಅನಿವಾರ್ಯವಾದಾಗ ಮಾತ್ರ ನಗದು ವ್ಯವಹಾರ ನಡೆಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...