alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರಿಗೊಂದು ಸಿಹಿ ಸುದ್ದಿ

cash-withdrawal-limit-from-atms-increased-to-rs-4500-per-day-from-january-1ಕಾಳ ಧನಕ್ಕೆ ಕಡಿವಾಣ ಹಾಕಲು ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಹಳೆಯ ನೋಟು ಜಮಾ ಮಾಡಲು ಹಾಗೂ ಖಾತೆಯಿಂದ ಹಣ ಪಡೆಯಲು ಹಲವು ನಿರ್ಬಂಧಗಳನ್ನು ವಿಧಿಸಿತ್ತು.

ಎಟಿಎಂ ಮೂಲಕ ಪ್ರತಿನಿತ್ಯ 2,500 ರೂ. ಹಾಗೂ ಬ್ಯಾಂಕ್ ನಿಂದ ವಾರಕ್ಕೆ 24 ಸಾವಿರ ರೂ. ಗಳನ್ನು ಮಾತ್ರ ಪಡೆಯಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಆನೇಕರು ತಮ್ಮ ದಿನನಿತ್ಯದ ವಹಿವಾಟಿಗೆ ಹಣ ಸಿಗದೆ ತೊಂದರೆಯನ್ನನುಭವಿಸಿದ್ದರು.

ಇದೀಗ ಎಟಿಎಂ ಗಳಿಂದ ಹಣ ಹಿಂಪಡೆಯುವ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. 2017 ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಎಟಿಎಂ ಗಳಿಂದ ಪ್ರತಿನಿತ್ಯ 4,500 ರೂ. ಪಡೆಯಬಹುದಾಗಿದೆ. ಅದರೆ ಬ್ಯಾಂಕ್ ನಿಂದ ವಾರಕ್ಕೆ ಪಡೆಯಬಹುದಾದ 24 ಸಾವಿರ ರೂ. ಗಳ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...