alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! RBI ಗೆ ಬ್ಯಾಂಕ್ ಮ್ಯಾನೇಜರ್ ಕಳಿಸಿದ್ದಾನೆ ನಕಲಿ ನೋಟು

ನಕಲಿ ನೋಟುಗಳನ್ನು ಗ್ರಾಹಕರಿಂದ ಪಡೆದು ಅದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕಳಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಆರ್ ಬಿ ಐ ಕಾನ್ಪುರ ಶಾಖೆಯ ಮ್ಯಾನೇಜರ್ ಸತಿ ಕುಮಾರ್ ನೀಡಿದ ದೂರಿನ ಅನ್ವಯ ಎಫ್ ಐ ಆರ್ ದಾಖಲಿಸಲಾಗಿದೆ.

1000 ಹಾಗೂ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಗ್ರಾಹಕರಿಂದ ಪಡೆದು ಅದನ್ನು ಆರ್ ಬಿ ಐ ಗೆ ಕಳಿಸಿರುವುದಾಗಿ ಆರೋಪಿ ಕೂಡ ಒಪ್ಪಿಕೊಂಡಿದ್ದಾನಂತೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ದೋಷಗಳಿಗೆ ಇದೊಂದು ನಿದರ್ಶನ. 12,500 ಕೋಟಿ ರೂಪಾಯಿ ವಂಚಿಸಿರುವ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯಂತಹ ಉದ್ಯಮಿಗಳಿಗೆ ಕೂಡ ಬ್ಯಾಂಕ್ ಅಧಿಕಾರಿಗಳೇ ಸಹಕರಿಸಿದ್ದು ಕೂಡ ಬಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...