alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಎಸ್ಟಿ ಎಫೆಕ್ಟ್ : ಬೈಕ್, ಕಾರುಗಳ ಬೆಲೆ ಇಳಿಕೆ

car

ಜಿಎಸ್ಟಿ ವಾಹನ ಸವಾರರಿಗೆ ಕೊಂಚ ಸಮಾಧಾನ ತಂದಿದೆ. ಜಿಎಸ್ಟಿ ಜಾರಿ ಬಳಿಕ ಕಾರು, ಸ್ಕೂಟರ್ ಮತ್ತು ಎಸ್ ಯು ವಿಗಳು ಅಗ್ಗವಾಗಿವೆ. ಆದ್ರೆ 350 ಸಿಸಿಗೂ ಅಧಿಕ ಪವರ್ ನ ಎಂಜಿನ್ ಹೊಂದಿರುವ ದೊಡ್ಡ ಬೈಕ್ ಗಳ ಬೆಲೆಯಲ್ಲಿ ಏರಿಕೆಯಾಗಿದೆ. ರಾಯಲ್ ಎನ್ ಫೀಲ್ಡ್, ಡುಕಾಟಿ, ಹಾರ್ಲೆ ಡೇವಿಡ್ಸನ್ ಬೈಕ್ ಗಳು ದುಬಾರಿಯಾಗಲಿವೆ.

ಜಿಎಸ್ಟಿ ಜಾರಿ ಬೆನ್ನಲ್ಲೇ ಕೆಲವು ಕಂಪನಿಗಳು ನೂತನ ದರದ ವಿವರವನ್ನು ಪ್ರಕಟಿಸಿವೆ. ಇನ್ನು ಕೆಲವು ಆಟೋಮೊಬೈಲ್ ಕಂಪನಿಗಳು ಬದಲಾವಣೆಯಲ್ಲಿ ನಿರತವಾಗಿದ್ದು, ಸೋಮವಾರದ ನಂತರ ಪರಿಷ್ಕೃತ ಬೆಲೆಯನ್ನು ಪ್ರಕಟಿಸುವ ಸಾಧ್ಯತೆ ಇದೆ.

ಉತ್ಪಾದನೆ, ಪೂರೈಕೆ, ಬಿಡಿಭಾಗಗಳ ಪೂರೈಕೆದಾರರು ಮತ್ತು ಡೀಲರ್ ಗಳ ಮಾರ್ಜಿನ್ ಗಳ ಮೇಲೂ ಜಿಎಸ್ಟಿ ಪರಿಣಾಮ ಬೀರಲಿದೆ. ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಇವತ್ತು ಮತ್ತು ನಾಳೆ ಯಾವುದೇ ಬಿಲ್ಲಿಂಗ್ ಹಾಗು ವಾಣಿಜ್ಯ ವಹಿವಾಟು ಮಾಡುವುದಿಲ್ಲ ಅಂತಾ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತಿಳಿಸಿವೆ.

ಸಣ್ಣ ಪುಟ್ಟ ಕಾರುಗಳ ಬೆಲೆಯಲ್ಲಿ ಅಲ್ಪ ಇಳಿಕೆಯಾದ್ರೆ, ಎಸ್ ಯು ವಿ ಮತ್ತು ಸೆಡಾನ್ ಕಾರುಗಳ ಬೆಲೆಯಲ್ಲಿ ಅತ್ಯಧಿಕ ಇಳಿಕೆಯಾಗಲಿದೆ. ಉದಾಹರಣೆಗೆ ಮರ್ಸಿಡಿಸ್ ಎಸ್ ಯು ವಿ ಬೆಲೆ 3 ಲಕ್ಷ ರೂಪಾಯಿ ಕಡಿಮೆಯಾದ್ರೆ, ಗ್ರಾಂಡ್ ಐ 10 ಕಾರಿನ ಬೆಲೆ 3000 – 14,000 ರೂಪಾಯಿಯಷ್ಟು ಇಳಿಕೆ ಕಾಣಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...