alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಕಿಹಾಕಿಕೊಂಡಿದ್ದ ‘ಎಟಿಎಂ’ ಕಾರ್ಡ್ ಹೊರತೆಗೆಯಲು ಯಂತ್ರವನ್ನೇ ಒಡೆದ ಭೂಪ

ಎಟಿಎಂನಿಂದ ಹಣ ಪಡೆಯಲು ಹೋದ ವೇಳೆ ಕೆಲವೊಮ್ಮೆ ಕಾರ್ಡ್ ಯಂತ್ರದೊಳಗೆ ಸಿಲುಕಿಕೊಳ್ಳುವುದುಂಟು. ಅಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಅವರ ಸಹಾಯದಿಂದ ಕಾರ್ಡ್ ಹೊರ ಪಡೆಯಲಾಗುತ್ತದೆ.

ಆದರೆ ಇಲ್ಲೊಬ್ಬ ಭೂಪ ಮಾಡಿರುವ ಕೆಲಸ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕಾಸರಗೋಡಿನಲ್ಲಿ ಈ ಘಟನೆ ನಡೆದಿದ್ದು, ಮಧೂರು ರಸ್ತೆ ಉಳಿಯತ್ತಡ್ಕದಲ್ಲಿ ವ್ಯಕ್ತಿಯೊಬ್ಬ ಆಕ್ಸಿಸ್ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡಲು ಹೋಗಿದ್ದಾನೆ.

ಈ ಸಂದರ್ಭದಲ್ಲಿ ಆತನ ಎಟಿಎಂ ಕಾರ್ಡ್ ಯಂತ್ರದೊಳಗೆ ಸಿಲುಕಿಕೊಂಡಿದೆ. ಆತ ಈ ಕುರಿತು ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡುವ ಬದಲು ಸಲಕರಣೆಗಳಿಂದ ಎಟಿಎಂ ಯಂತ್ರವನ್ನೇ ಒಡೆದು ತನ್ನ ಕಾರ್ಡ್ ಹೊರ ತೆಗೆದುಕೊಂಡಿದ್ದಾನೆ. ಇದೀಗ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...