alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನದ ವಿಮೆ ಮಾಡುವ ಮೊದಲು ನಿಮಗಿದು ತಿಳಿದಿರಲಿ

ಕಾರು ಅಥವಾ ಇನ್ನಾವುದೋ ವಾಹನದ ವಿಮೆ ಮಾಡಲು ಹೊರಟಿದ್ದರೆ ಈ ಸುದ್ದಿಯನ್ನು ಅಗತ್ಯವಾಗಿ ಓದಿ. ವಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಐ.ಆರ್.ಡಿ.ಎ.ಐ. ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹೊರಸೂಸುವಿಕೆ ನಿಯಮದ ಉಲ್ಲಂಘನೆಯನ್ನು ತಡೆಯಲು ಐ.ಆರ್.ಡಿ.ಎ.ಐ. ಹೊಸ ನಿಯಮ ಜಾರಿಗೆ ತಂದಿದೆ. ಇದ್ರ ಪ್ರಕಾರ ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ)ವಿದ್ದಲ್ಲಿ ಮಾತ್ರ ವಾಹನದ ವಿಮೆ ಮಾಡಿಸಲು ಅಥವಾ ನವೀಕರಿಸಲು ಸಾಧ್ಯ. ಈ ಬಗ್ಗೆ ಐ.ಆರ್.ಡಿ.ಎ.ಐ. ಎಲ್ಲ ವಾಹನ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.

ವಾಹನ ಮಾಲೀಕರ ಕೈನಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದೆ ಹೋದಲ್ಲಿ ಯಾವುದೇ ವಾಹನದ ವಿಮೆ ಮಾಡಬೇಡಿ ಎಂದು ಸೂಚನೆ ನೀಡಿದೆ. ಹಿಂದಿನ ವರ್ಷ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಐ.ಆರ್.ಡಿ.ಎ.ಐ. ಈ ನಿರ್ದೇಶನ ನೀಡಿದೆ.

ಸದ್ಯ ಮಾಲಿನ್ಯ ಮಟ್ಟವನ್ನು ಕಂಡು ಹಿಡಿಯಲು ಗಣಕೀಕೃತ ಸೌಲಭ್ಯ ಹಾಗೂ ಪಿಯು ಪ್ರಮಾಣ ಪತ್ರ ಕೆಲ ಪೆಟ್ರೋಲ್ ಬಂಕ್ ಹಾಗೂ ಕಾರ್ಯಾಗಾರಗಳಲ್ಲಿ ಲಭ್ಯವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...