alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಮಾಲೀಕರಿಗೆ ಮತ್ತೊಂದು ಶಾಕ್

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ವಾಹನ ಮಾಲೀಕರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಕಾರು ಮತ್ತು ಬೈಕ್ ಗಳ ಮಾಲೀಕರ ವೈಯಕ್ತಿಕ ಅಪಘಾತ ವಿಮೆಯ ಮೊತ್ತವನ್ನು 15 ಲಕ್ಷ ರೂ. ಗಳಿಗೆ ಏರಿಸಲಾಗಿದ್ದು ಇದರಿಂದಾಗಿ ವಿಮೆಯ ಪ್ರೀಮಿಯಂ ಮೊತ್ತ ಕೂಡ ಏರಿಕೆಯಾಗಲಿದೆ.

ವಾಹನ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಈ ಹಿಂದೆ ಕಾರುಗಳಿಗೆ 2 ಲಕ್ಷ ರೂ. ಮತ್ತು ದ್ವಿಚಕ್ರ ವಾಹನಗಳಿಗೆ ಒಂದು ಲಕ್ಷ ರೂ. ವಿಮೆ ಮಾಡಿಸುವುದು ಕಡ್ಡಾಯವಾಗಿತ್ತು.

ಇದರ ಜೊತೆಗೆ ಥರ್ಡ್ ಪಾರ್ಟಿ ವಿಮೆಯೂ ಕಡ್ಡಾಯವಾಗಿದ್ದು, ವೈಯಕ್ತಿಕ ಅಪಘಾತದ ವಿಮೆಯನ್ನು ವಾಹನ ಮಾಲಿಕರು ಹೊಂದಿರಲೇಬೇಕು ಎಂದು ವಿಮಾ ನಿಯಂತ್ರಕ ಸಂಸ್ಥೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...