alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನಿಸಿ: ಕೆನರಾ ಬ್ಯಾಂಕ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಭಾರತದ ಪ್ರಮುಖ ಬ್ಯಾಂಕ್ ನಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್‌ ನಲ್ಲಿರುವ 800 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನವಾಗಿದ್ದು, ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ ಕೆನರಾ ಬ್ಯಾಂಕ್ ತಿಳಿಸಿದೆ.

ದೇಶದ ವಿವಿಧ ಬ್ರಾಂಚ್ ಗಳಲ್ಲಿ‌ ಖಾಲಿಯಿರುವ 800 ಪ್ರೊಬೇಷನರಿ‌ ಹುದ್ದೆಗಳಿಗೆ ಅರ್ಜಿಯನ್ನು‌ ಅ.23 ರಂದು‌ ಕೆನರಾ ಬ್ಯಾಂಕ್ ಆಹ್ವಾನಿಸಿತ್ತು. ಮಂಗಳವಾರ ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದ್ದು,‌ ಡಿ. 23ರಂದು ಅರ್ಹತಾ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ ಒಂದು ವರ್ಷ ಬ್ಯಾಂಕಿಂಗ್ ಹಾಗೂ ಆರ್ಥಿಕ‌ ವಿಷಯದಲ್ಲಿ ಪಿಜಿ‌ ಡಿಪ್ಲೊಮಾ ಕೋರ್ಸ್ ನ್ನು‌ ನೀಡಲಾಗುವುದು. ಒಂದು ವರ್ಷದ ಕೋರ್ಸ್ ನಲ್ಲಿ‌ 9 ತಿಂಗಳು ತರಗತಿ ಹಾಗೂ 3 ತಿಂಗಳು ಬ್ಯಾಂಕ್ ನಲ್ಲಿ‌ ತರಬೇತಿ ನೀಡಲಾಗುವುದು ಕೆನರಾ ಬ್ಯಾಂಕ್ ತಿಳಿಸಿದೆ.

ಪಿಜಿ‌ ಡಿಪ್ಲೊಮ ಕೋರ್ಸ್ ‌ಬೆಂಗಳೂರಿನ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸೊಸೈಟಿ ಅಥವಾ ಗ್ರೇಟರ್ ನೊಯ್ಡದಲ್ಲಿರುವ ನಿಟ್ಟೆ‌ ಎಜುಕೇಶನ್ ನಲ್ಲಿ ತರಬೇತಿ ನೀಡಲಾಗುವುದು. ಈ‌ ಎರಡು‌ ಕೇಂದ್ರದಲ್ಲಿ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...