alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಆನ್ಲೈನ್ ನಲ್ಲಿ ಸಿಗ್ತಾರೆ ಮಂಗಳಮುಖಿಯರು

ಮದುವೆಯಿರಲಿ ಇಲ್ಲ ಸೀಮಂತ ಇರಲಿ. ಕೆಲವು ಕಡೆ ಈ ಮಂಗಳ ಕಾರ್ಯಕ್ಕೆ ಮಂಗಳಮುಖಿಯರು ಬೇಕು. ಇನ್ಮುಂದೆ ಮಂಗಳಮುಖಿಯರ ಹುಡುಕಾಟ ನಡೆಸಬೇಕಾಗಿಲ್ಲ. ಆನ್ಲೈನ್ ಮೂಲಕವೇ ಮಂಗಳಮುಖಿಯರನ್ನು ಬುಕ್ ಮಾಡಬಹುದು.

ಯಸ್, ಶೀಘ್ರದಲ್ಲಿಯೇ ಮಂಗಳಮುಖಿಯರು ಆನ್ಲೈನ್ ನಲ್ಲಿ ಸಿಗಲಿದ್ದಾರೆ. ನವೆಂಬರ್ ನಲ್ಲಿ ದಿ ನಚ್ ಬಾಜಾ ಡಾಟ್ ಕಾಂ ಶುರುವಾಗ್ತಿದೆ. ಈ ವೆಬ್ ಸೈಟ್ ಮೂಲಕ ನೀವು ಆನ್ಲೈನ್ ನಲ್ಲಿಯೇ ಮಂಗಳಮುಖಿಯರನ್ನು ಬುಕ್ ಮಾಡಬಹುದಾಗಿದೆ. ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಲು ಉದ್ಯಮ ಇಲಾಖೆ ಈ ವೆಬ್ಸೈಟ್ ಶುರುಮಾಡಿದೆ.

ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ, ಸೀಮಂತ, ಮಕ್ಕಳ ನಾಮಕರಣ ಸೇರಿದಂತೆ ವಿಶೇಷ ಸಮಾರಂಭಗಳ ಮೆರಗು ಹೆಚ್ಚಿಸಲು ನೀವು ಮಂಗಳಮುಖಿ ಕಲಾವಿದರನ್ನು ವೆಬ್ ಸೈಟ್ ಮೂಲಕ ಸಂಪರ್ಕಿಸಬಹುದಾಗಿದೆ.

ಈ ವೆಬ್ಸೈಟ್ ಜೊತೆ ಈಗಾಗಲೇ 1500 ಕಲಾವಿದರು ಕೈ ಜೋಡಿಸಿದ್ದಾರೆ. ನೋಂದಣಿ ಉಚಿತವಾಗಿರಲಿದೆ. ಕಾರ್ಯಕ್ರಮ ನೀಡಿದ ನಂತ್ರ ಬಂದ ಹಣದಲ್ಲಿ 100 ರೂಪಾಯಿಯನ್ನು ಕಲಾವಿದರು ವೆಬ್ ಸೈಟ್ ಗೆ ನೀಡಬೇಕಾಗುತ್ತದೆ. ಮೊಬೈಲ್ ಆ್ಯಪ್ ಮೂಲಕವೂ ಹೆಸರು ನೋಂದಣಿ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...