alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತವಾಗಿ ಸಿನಿಮಾ ನೋಡಿ, ಆಮೇಲೆ ಹಣ ಕೊಡಿ

ಪಿವಿಆರ್ ಗಳಲ್ಲಿ ಸಿನಿಮಾ ನೋಡೋದು ಎಲ್ಲರಿಗೂ ಸಾಧ್ಯವಿಲ್ಲ. ದುಬಾರಿ ಟಿಕೆಟ್ ನಿಂದಾಗಿ ಅನೇಕರು ಪಿವಿಆರ್ ಕಡೆ ಮುಖ ಮಾಡಿ ಮಲಗೋದಿಲ್ಲ. ಇನ್ನು ಕೆಲವರು ಇಂದು ಕೈನಲ್ಲಿ ಹಣವಿಲ್ಲ ಎನ್ನುವ ಕಾರಣಕ್ಕೆ ಸಿನಿಮಾ ನೋಡೋದನ್ನು ಮುಂದೂಡುತ್ತಾರೆ. ಇಂದು ಕೈನಲ್ಲಿ ಹಣವಿಲ್ಲ ಎನ್ನುವ ಕಾರಣಕ್ಕೆ ಇನ್ಮುಂದೆ ಸಿನಿಮಾ ನೋಡೋದನ್ನು ಮುಂದೂಡಬೇಕಾಗಿಲ್ಲ. ಕಂಪನಿಯೊಂದು ಉಚಿತವಾಗಿ ಸಿನಿಮಾ ನೋಡಲು ಅವಕಾಶ ಮಾಡಿಕೊಡ್ತಿದೆ.

ಹಣವಿಲ್ಲದೆ ಸಿನಿಮಾ ನೋಡ್ಬುಹುದಾ ಎಂದು ಆಶ್ಚರ್ಯಗೊಳ್ಳಬೇಡಿ. ನೀವು ಹಣ ಕೊಡಲೇಬೇಕು. ಆದ್ರೆ ಸಿನಿಮಾ ನೋಡುವ ದಿನ ಟಿಕೆಟ್ ಹಣ ನೀಡಬೇಕಾಗಿಲ್ಲ. 14 ದಿನಗಳವರೆಗೆ ನಿಮಗೆ ಅವಕಾಶವಿರುತ್ತದೆ. ಸಿನಿಮಾ ನೋಡಿ 14 ದಿನಗಳೊಳಗೆ ಹಣವನ್ನು ನೀಡಿದ್ರೆ ಸಾಕು.

Epaylate ನಿಮಗೆ ಈ ಅವಕಾಶ ನೀಡ್ತಿದೆ. Epaylate ಅಕೌಂಟ್ ತೆರೆಯಲು ನಿಮ್ಮ ಬಳಿ ಪ್ಯಾನ್ ಅಥವಾ ಆಧಾರ್ ಕಾರ್ಡ್ ಇರಬೇಕು. Epaylate ಅಕೌಂಟ್ ಓಪನ್ ಆಗ್ತಿದ್ದಂತೆ ನಿಮ್ಮ ಬಳಿ ಎಷ್ಟು ಕ್ರೆಡಿಟ್ ಲಿಮಿಟ್ ಇದೆ ಎಂಬುದು ಗೊತ್ತಾಗುತ್ತದೆ. ವಹಿವಾಟು ಹೆಚ್ಚಾದಂತೆ ಕ್ರೆಡಿಟ್ ಲಿಮಿಟ್ ಹೆಚ್ಚಾಗುತ್ತದೆ. 14 ದಿನಗಳ ನಂತ್ರವೂ ನೀವು ಟಿಕೆಟ್ ಹಣ ಪಾವತಿ ಮಾಡಿಲ್ಲವೆಂದಾದ್ರೆ ಕಂಪನಿ ಬಡ್ಡಿ ವಸೂಲಿ ಮಾಡುತ್ತದೆ. ನೀವು ಎಷ್ಟು ದಿನ ವಿಳಂಬ ಮಾಡ್ತಿರೋ ಅಷ್ಟು ದಿನದ ಬಡ್ಡಿಯನ್ನು ನೀಡಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...