alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ ನಂತ್ರ ಕಡಿಮೆಯಾಗಲಿದೆ ಚಿನ್ನದ ಬೆಲೆ…?

ಚಿನ್ನ ಖರೀದಿ ಯೋಜನೆಯಲ್ಲಿದ್ದರೆ ಬಜೆಟ್ ನಂತ್ರ ಮುಂದಿನ ಹೆಜ್ಜೆಯಿಡಿ. ಯಾಕೆಂದ್ರೆ ಬಜೆಟ್ ನಂತ್ರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. 31 ಸಾವಿರ ಗಡಿ ತಲುಪಿರುವ ಚಿನ್ನ ಬಜೆಟ್ ನಂತ್ರ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇಂಡಿಯನ್‌ ಬುಲಿಯನ್‌ ಆ್ಯಂಡ್‌ ಜ್ಯೂವೆಲರ್ಸ್‌ ಅಸೋಸಿಯೇಷನ್‌, ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ನಲ್ಲಿ ಉಡುಗೊರೆ ನೀಡಲಿದ್ದಾರೆಂಬ ನಿರೀಕ್ಷೆಯಲ್ಲಿದೆ. ಚಿನ್ನದ ಆಮದು ಸುಂಕ ಬಜೆಟ್ ನಲ್ಲಿ ಕಡಿಮೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದೆ. ಒಂದು ವೇಳೆ ಆಮದು ಸುಂಕ ಕಡಿಮೆ ಆದಲ್ಲಿ ಚಿನ್ನದ ಬೆಲೆ 600-1200ರವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.

ಇಂಡಿಯನ್‌ ಬುಲಿಯನ್‌ ಆ್ಯಂಡ್‌ ಜ್ಯೂವೆಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷರ ಪ್ರಕಾರ, ಬಜೆಟ್ ನಲ್ಲಿ ಚಿನ್ನದ ಆಮದು ಸುಂಕ ಶೇಕಡಾ 2-4ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ನಿರಂತರವಾಗಿ ಏರುತ್ತಿರುವ ಚಿನ್ನದ ಬೆಲೆಗೆ ಬ್ರೇಕ್ ಬೀಳಲಿದೆ. ಚಿನ್ನ ಖರೀದಿದಾರರಿಗೂ ಇದ್ರಿಂದ ಲಾಭವಾಗಲಿದೆ ಎಂದಿದ್ದಾರೆ.

ಭಾರತದಲ್ಲಿ ಶೇಕಡಾ 95ರಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 31000 ರೂಪಾಯಿಯಿದೆ. ಆಮದು ಸುಂಕದಲ್ಲಿ ಶೇಕಡಾ 1ರಷ್ಟು ಕಡಿಮೆಯಾದ್ರೂ ಚಿನ್ನದ ಬೆಲೆ 300 ರೂಪಾಯಿ ಇಳಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...