alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹ ಬಳಕೆ ಉಪಕರಣಗಳ ಖರೀದಿದಾರರಿಗೆ ಕಹಿ ಸುದ್ದಿ

ಗೃಹಬಳಕೆಯ ವಿದ್ಯುನ್ಮಾನ ಉಪಕರಣಗಳ ಖರೀದಿದಾರರಿಗೆ ಒಂದು ಕೆಟ್ಟ ಸುದ್ದಿ.
ಈ ತಿಂಗಳ ಅಂತ್ಯಕ್ಕೆ, ಉಪಕರಣಗಳ ಬೆಲೆ ಶೇ.3-6 ರಷ್ಟು ಹೆಚ್ಚಾಗಲಿದೆ.

ದೇಶದ ಸುಮಾರು ಶೇ.55 ಕ್ಕೂ ಹೆಚ್ಚು ಮಾರುಕಟ್ಟೆಯನ್ನು ಹೊಂದಿರುವ ಎಲ್‌ಜಿ ಹಾಗೂ ಸಾಮ್‌ಸಂಗ್‌ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದು, ಆಗಸ್ಟ್‌ ಕೊನೆ ವಾರದಿಂದ ನೂತನ ಬೆಲೆ ಜಾರಿಗೆ ಬರಲಿದೆ.

ಇತ್ತೀಚೆಗೆ ಕೇಂದ್ರ ಸರಕಾರ ಗೃಹಬಳಕೆ ಉತ್ಪನ್ನಗಳನ್ನೂ ಸೇರಿದಂತೆ ಸುಮಾರು 500 ವಸ್ತುಗಳ ಮೇಲೆ ಜಿಎಸ್‌ಟಿ ಇಳಿಸಿತ್ತು. ಇದರಿಂದ ಒಟ್ಟಾರೆ ಬೆಲೆಯಲ್ಲಿ ಇಳಿಕೆಯಾಗಿತ್ತು. ಇದೀಗ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿರುವುದರಿಂದ ಮತ್ತೆ ತುಟ್ಟಿಯಾಗಲಿದೆ.

ಉತ್ಪನ್ನಗಳಿಗೆ ಕನಿಷ್ಠ 700 ರಿಂದ ಗರಿಷ್ಠ 3 ಸಾವಿರ ರೂ. ವರೆಗೆ ಏರಿಕೆಯಾಗಲಿದೆ. ಆದರೆ ಈ ಸಂಬಂಧ ಎಲ್‌ಜಿ ವ್ಯವಹಾರ (ರೆಫ್ರಿಜಿರೇಟರ್ಸ್) ಮುಖ್ಯಸ್ಥ ವಿಜಯ್‌ ಬಾಬು, ಸದ್ಯಕ್ಕೆ ಬೆಲೆ ಏರಿಕೆಯ ಪ್ರಸ್ತಾವನೆ ಇಲ್ಲ. ಮಾರುಕಟ್ಟೆ ಪರಿಸ್ಥಿತಿಯನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಎರಡು ದೈತ್ಯ ಕಂಪನಿಗಳನ್ನು ಹೊರತುಪಡಿಸಿ, ಕೊಡಾಕ್‌, ಥಾಮ್ಸನ್‌, ಬಿಪಿಎಲ್‌ ಸಂಸ್ಥೆಗಳು 32 ಇಂಚು ಹಾಗೂ ಅದಕ್ಕಿಂತ ದೊಡ್ಡ ಗಾತ್ರದ ಟಿವಿಗಳಿಗೆ 1 ಸಾವಿರ ರೂ.ನಿಂದ 2,200 ರೂ. ಹೆಚ್ಚಿಸಲು ತೀರ್ಮಾನಿಸಿದೆ. ಅಂತೆಯೇ ಪ್ಯಾನಸಾನಿಕ್‌, ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಶೇ.2 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ರೂಪಾಯಿ ಮೌಲ್ಯ ಕುಸಿತದಿಂದ ಬಿಡಿ ಭಾಗಗಳ ಅಮದು ದುಬಾರಿಯಾಗಿರುವುದೇ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...