alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನಿಸಿ: ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯ

ಸೆಪ್ಟೆಂಬರ್ 1 ಅಂದರೆ ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯಗೊಳಿಸಿದ್ದು, ಈ ಮೂಲಕ ಕಾರು, ಬೈಕ್ ಗಳ ಖರೀದಿ ದರದಲ್ಲಿ ಹೆಚ್ಚಳವಾಗಲಿದೆ.

ಸಾಮಾನ್ಯ ವಿಮೆ ಕಂಪನಿಗಳು ಹೊಸ ಕಾರುಗಳಿಗೆ 3 ವರ್ಷಗಳ ಅವಧಿಯ ಥರ್ಡ್‌ ಪಾರ್ಟಿ ವಿಮೆ ಹಾಗೂ ದ್ವಿ ಚಕ್ರವಾಹನಗಳಿಗೆ 5 ವರ್ಷದ ವಿಮೆ ಕೊಡಬೇಕು.

ಸುಪ್ರೀಂಕೋರ್ಟ್‌ ಆದೇಶದ ಅನ್ವಯ ವಿಮೆ ನಿಯಂತ್ರಣ ಪ್ರಾಧಿಕಾರ ಈ ಕ್ರಮ ಕೈಗೊಂಡಿದ್ದು, 1,000 ಸಿಸಿಗಿಂತ ಕಡಿಮೆ ಸಾಮರ್ಥ್ಯ‌ದ ಎಂಜಿನ್‌ ಇರುವ ಕಾರುಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಬೆಲೆ 5,286 ರೂ. ಆಗುತ್ತದೆ.

75 ಸಿಸಿಗಿಂತ ಕಡಿಮೆ ಸಾಮರ್ಥ್ಯ‌ದ ಎಂಜಿನ್‌ ಇರುವ ದ್ವಿಚಕ್ರವಾಹನಕ್ಕೆ 5 ವರ್ಷಗಳ ಥರ್ಡ್‌ ಪಾರ್ಟಿ ವಿಮೆ ಬೆಲೆ 1,045 ರೂ. ಹಾಗೂ 150 ಸಿಸಿ ಒಳಗಿನ ದ್ವಿಚಕ್ರವಾಹನಗಳಿಗೆ 3,285 ರೂ. ಆಗುತ್ತದೆ. 350 ಸಿಸಿಗಿಂತ ಹೆಚ್ಚಿದ್ದರೆ ವಿಮೆ ಬೆಲೆ 13,034 ರೂ. ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...