alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 95 ರೂ.ಗೆ ಸಿಗಲಿದೆ ಜಿಯೋ ಫೀಚರ್ ಫೋನ್

ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಪ್ರವೇಶ ಮಾಡ್ತಿದ್ದಂತೆ ಪಟಾಕಿ ಸಿಡಿಸಿತ್ತು. ಮೊದಲು ಡೇಟಾ, ನಂತ್ರ ಫೀಚರ್ ಫೋನ್ ಬಿಡುಗಡೆ ಮಾಡಿ ಜಿಯೋ ಸದ್ದು ಮಾಡ್ತಿದೆ. ಜಿಯೋ ಫೀಚರ್ ಫೋನ್ 2017 ರಲ್ಲಿ ಮಾರುಕಟ್ಟೆಗೆ ಬಂದಿದ್ದು, ಮಾರುಕಟ್ಟೆ ಪ್ರವೇಶ ಮಾಡಿ ಕೆಲವೇ ದಿನಗಳಲ್ಲಿ ಗ್ರಾಹಕರ ಮನಗೆದ್ದಿದೆ. ಈಗ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ಜಿಯೋ ನೀಡ್ತಿದೆ.

ಕೇವಲ 95 ರೂಪಾಯಿಗೆ ಜಿಯೋ ಫೀಚರ್ ಫೋನ್ ಗ್ರಾಹಕರಿಗೆ ಸಿಗಲಿದೆ. ಆದ್ರೆ ಈ ಆಫರ್ ಕೇವಲ ರಾಜಸ್ತಾನದ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಜಿಯೋ ರಾಜಸ್ತಾನ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಈ ಆಫರ್ ನೀಡ್ತಿದೆ. ಆರು ತಿಂಗಳ ಅನಿಯಮಿತ ಕರೆ ಹಾಗೂ ಡೇಟಾ ಜೊತೆ ಜಿಯೋ ಫೀಚರ್ ಫೋನ್ ಕೇವಲ 95 ರೂಪಾಯಿಗೆ ಲಭ್ಯವಿದೆ.

ಗ್ರಾಹಕರು 1,095 ರೂಪಾಯಿ ನೀಡಬೇಕು. ನಂತ್ರ 500 ರೂಪಾಯಿಯನ್ನು ಗ್ರಾಹಕರ ಖಾತೆಗೆ ಜಿಯೋ ಜಮಾ ಮಾಡಲಿದೆ. ರಾಜಸ್ತಾನ ಸರ್ಕಾರದ ಬಾಮಾಶಾ ಕಾರ್ಡ್ ಇರುವವರಿಗೆ ಮಾತ್ರ ಇದು ಸಿಗಲಿದೆ. ಉಳಿದ 500 ರೂಪಾಯಿಯನ್ನು ಬಾಮಾಶಾ ಖಾತೆಗೆ ಜಮಾ ಮಾಡಲಿದೆ. ಗ್ರಾಹಕರು ಬಾಮಾಶಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತ್ರ ಹಣ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...