alex Certify
ಕನ್ನಡ ದುನಿಯಾ       Mobile App
       

Kannada Duniya

1000 ರೂ.ಗೆ ಸಿಗಲಿದೆ ಎಸಿ ಗಾಳಿ….ಮನೆಯಲ್ಲೇ ಕುಳಿತು ಹೀಗೆ ಬುಕ್ ಮಾಡಿ

ಬೇಸಿಗೆ ಶುರುವಾಗಿದೆ. ಬಿಸಿಲ ಝಳಕ್ಕೆ ಬೇಸತ್ತ ಜನರು ಎಸಿ, ಕೂಲರ್ ಮೊರೆ ಹೋಗ್ತಿದ್ದಾರೆ. ಆದ್ರೆ ಎಸಿ, ಕೂಲರ್ ಖರೀದಿ ಮಾಡೋದು ಸುಲಭದ ಮಾತಲ್ಲ. ದುಬಾರಿ ಬೆಲೆ ಜನರನ್ನು ಚಿಂತೆಗೀಡು ಮಾಡಿದೆ. ಕೂಲರ್, ಎಸಿ ಇಲ್ಲದೆ ಹೇಗಪ್ಪ ಬೇಸಿಗೆ ಕಳೆಯೋದು ಎನ್ನುವ ಚಿಂತೆಯಲ್ಲಿ ನೀವಿದ್ದರೆ ನಿಮಗೊಂದು ಖುಷಿ ಸುದ್ದಿ ಇಲ್ಲಿದೆ.

ಎಸಿ ಹಾಗೂ ಕೂಲರನ್ನು ಖರೀದಿ ಮಾಡಬೇಕಾಗಿಲ್ಲ. ಈಗ ಎಸಿ ಮತ್ತು ಕೂಲರ್ ಬಾಡಿಗೆಗೆ ಸಿಗುತ್ತದೆ. ಎಸಿ, ಕೂಲರ್, ಫ್ರಿಜ್ ಸೇರಿದಂತೆ ಅನೇಕ ವಸ್ತುಗಳು ನಿಮಗೆ ಬಾಡಿಗೆಗೆ ಸಿಗುತ್ತದೆ. ನೀವು ಮನೆಯಲ್ಲಿಯೇ ಕುಳಿತು ಬಾಡಿಗೆ ಎಸಿ, ಕೂಲರ್ ಗೆ ಆರ್ಡರ್ ಮಾಡಬಹುದಾಗಿದೆ.

ಆನ್ಲೈನ್ ರೆಂಟಲ್ ಮಾರುಕಟ್ಟೆಯಲ್ಲಿ ಈ ವಸ್ತುಗಳು 200 ರೂಪಾಯಿಯಿಂದ ಹಿಡಿದು 2 ಸಾವಿರ ರೂಪಾಯಿವರೆಗೆ ಬಾಡಿಗೆಗೆ ಸಿಗುತ್ತದೆ. ಮಾರ್ಕೆಟ್ ಪ್ಲೇಸ್ ನಲ್ಲಿ ಎಸಿ ಅಥವಾ ಕೂಲರ್ 799 ರೂಪಾಯಿಯಿಂದ 2049 ರೂಪಾಯಿ ಒಳಗೆ ಬಾಡಿಗೆಗೆ ಸಿಗಲಿದೆ.

ಬೇರೆ ಕಂಪನಿಗಳು ಕೂಡ ಇದೇ ಬೆಲೆಗೆ ಬಾಡಿಗೆ ನೀಡ್ತಿವೆ. GrabOnRent.com, rentomo ಮತ್ತು rentickle ಸೈಟ್ ಗಳಲ್ಲಿ ಎಸಿ ಸೇರಿದಂತೆ ಅನೇಕ ವಸ್ತುಗಳು ಬಾಡಿಗೆಗೆ ಸಿಗಲಿವೆ. ಕೆಲವೇ ಗಂಟೆಗಳಲ್ಲಿ ವಸ್ತುಗಳು ಡಿಲೆವರಿ ಆಗಲಿವೆ. ಕೆಲ ಕಂಪನಿಗಳು ಡಿಲೆವರಿಯನ್ನು ಉಚಿತವಾಗಿ ನೀಡ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...