alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲವೇ ಗಂಟೆಯಲ್ಲಿ ಬಂದ್ ಆಗಲಿದೆ ಸೂಪರ್ ಆಫರ್

jio_munzir_1024_1490938164_749x421

ನೋಡ್ತಾ ನೋಡ್ತಾ ಏಪ್ರಿಲ್ 1 ಬಂದೇ ಬಿಟ್ಟಿದೆ. ಇನ್ನೇನು ಕೆಲವೇ ಗಂಟೆ ಬಾಕಿ ಇದೆ. ನಾಳೆಯಿಂದ ಏನು ಮಾಡೋದಪ್ಪಾ ಎಂಬ ಚಿಂತೆ ಜಿಯೋ ಗ್ರಾಹಕರದ್ದು. ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡಿತ್ತು. ಕ್ಯೂನಲ್ಲಿ ನಿಂತು ಸಿಮ್ ತೆಗೆದುಕೊಂಡವರ ಮುಖ ಈಗ ಸಪ್ಪೆಯಾಗಿದೆ.

ಸೆಪ್ಟೆಂಬರ್ ನಿಂದ ಮೂರು ತಿಂಗಳು ಉಚಿತ ಕರೆ, ಉಚಿತ ಡೇಟಾ, ಉಚಿತ ಸಾಂಗ್, ಉಚಿತ ಸಿನಿಮಾ ಎಲ್ಲ ಉಚಿತವಾಗಿ ಮಾಡಿದ್ದಾಯ್ತು. ಬಂಪರ್ ಎನ್ನುವಂತೆ ರಿಲಾಯನ್ಸ್ ಜಿಯೋ ಯೋಜನೆ ಬದಲಿಸಿ ಮಾರ್ಚ್ 31 ರವರೆಗೂ ಎಲ್ಲ ಉಚಿತ. ಮಜಾ ಮಾಡಿ ಅಂತಾ ಗ್ರಾಹಕರಿಗೆ ಹೇಳಿತ್ತು. ಮೂರೇ ತಿಂಗಳಾ ಅಂತಾ ಬೇಸರದಲ್ಲಿದ್ದವರಿಗೆ ಮತ್ತೆ ಮೂರು ತಿಂಗಳು ಸಿಕ್ಕಿದ್ದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು.

ಮಾರ್ಚ್ 31 ಬಂದೇ ಬಿಟ್ಟಿದೆ. ಇನ್ನು ಕೆಲವೇ ಗಂಟೆಗಳಲ್ಲಿ ರಿಲಾಯನ್ಸ್ ಜಿಯೋ ಉಚಿತ ಕರೆ, ಡೇಟಾ ಎಲ್ಲ ರದ್ದಾಗಲಿದೆ. ಬೇಕಾದ್ರೆ ಹಣ ಕಟ್ಟಿ ಡೇಟಾ ಪಡೆಯಬೇಕು. ಜಿಯೋ ಪ್ರಿಮಿಯರ್ ಈಗಾಗಲೇ ಶುರುವಾಗಿದ್ದು ಗ್ರಾಹಕರು ಕರೆನ್ಸಿ ಹಾಕಿಸಿಕೊಳ್ಳಲು ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...