alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್….ಇಳಿಕೆಯಾಗ್ತಿದೆ ಪೆಟ್ರೋಲ್ ಬೆಲೆ..!

petrol

ಭಾರತ-ಅಮೆರಿಕ ನಡುವಣ ಬಾಂಧವ್ಯದ ಹೊಸ ಶಕೆ ಆರಂಭವಾಗ್ತಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಮೆರಿಕದಿಂದ ಕಚ್ಚಾ ತೈಲ ಭಾರತಕ್ಕೆ ಬರಲಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.

ದಕ್ಷಿಣ ಕೊರಿಯಾ, ಜಪಾನ್ ಹಾಗೂ ಚೀನಾ ಈಗಾಗ್ಲೇ ಅಮೆರಿಕದಿಂದ ತೈಲ ಆಮದು ಮಾಡಿಕೊಳ್ತಿವೆ. ಸದ್ಯದಲ್ಲೇ ಭಾರತ ಕೂಡ ಆ ಸಾಲಿಗೆ ಸೇರ್ಪಡೆಯಾಗಲಿದೆ. ಈ ಒಪ್ಪಂದ ಈಗಾಗ್ಲೇ ಅಂತಿಮಗೊಂಡಿದ್ದು, ದಾಖಲೆಗಳ ಹಸ್ತಾಂತರವೂ ನಡೆದಿದೆ.

ಸೆಪ್ಟೆಂಬರ್ ಕೊನೆ ವಾರದಲ್ಲಿ 2 ಮಿಲಿಯನ್ ಬ್ಯಾರೆಲ್ ತೈಲ ಭಾರತಕ್ಕೆ ಬರಲಿದೆ. ಇದಕ್ಕೆ ತಗುಲುವ ವೆಚ್ಚ 100 ಮಿಲಿಯನ್ ಡಾಲರ್. ಈ ವಹಿವಾಟಿನಿಂದ ಭಾರತ ಅಮೆರಿಕ ನಡುವಣ ದ್ವಿಪಕ್ಷೀಯ ಸಂಬಂಧ ಸುಧಾರಿಸಲಿದೆ. ಜೊತೆಗೆ ಪೆಟ್ರೋಲ್ ಬೆಲೆಯೂ ಇಳಿಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...